ADVERTISEMENT

ಹಿರಿಯರ ನೆನೆವ ದಿನ ಏಕಾದಶಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 2:10 IST
Last Updated 11 ಜುಲೈ 2022, 2:10 IST
ಆಷಾಢ ಏಕಾದಶಿ ಪ್ರಯುಕ್ತ ಹೊಸದುರ್ಗದ ಕಾರೇಹಳ್ಳಿಯಲ್ಲಿ ಗ್ರಾಮಸ್ಥರು ಕಲ್ಬಾಣ ಪೂಜೆ ನೆರವೇರಿಸಿದರು.
ಆಷಾಢ ಏಕಾದಶಿ ಪ್ರಯುಕ್ತ ಹೊಸದುರ್ಗದ ಕಾರೇಹಳ್ಳಿಯಲ್ಲಿ ಗ್ರಾಮಸ್ಥರು ಕಲ್ಬಾಣ ಪೂಜೆ ನೆರವೇರಿಸಿದರು.   

ಹೊಸದುರ್ಗ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರೆಲ್ಲಾ ಒಟ್ಟಾಗಿ ಹಿರಿಯರ ಸಮಾಧಿಗೆ ಪೂಜೆ (ಕಲ್ಬಾಣ ಪೂಜೆ) ಸಲ್ಲಿಸುವ ಮೂಲಕ ಹಿರಿಯರನ್ನು ನೆನೆವ ಸುದಿನ ಏಕಾದಶಿ ಆಚರಿಸಿದರು.

‘ಪ್ರತಿವರ್ಷ ಏಕಾದಶಿಯಂದು ಊರಿನ ಎಲ್ಲರೂ ಒಟ್ಟಾಗಿ ಒಂದೇ ಕಡೆ ಪೂಜೆ ಸಲ್ಲಿಸುತ್ತೇವೆ. ಹಬ್ಬದ ಮೂರು ದಿನಕ್ಕೂ ಮುಂಚೆ ಮನೆಯಲ್ಲಿ ಒಬ್ಬರು ಉಪವಾಸ ವ್ರತ ಆರಂಭಿಸುತ್ತಾರೆ. ಹಬ್ಬದ ದಿನ ಬೆಳಿಗ್ಗೆಯಿಂದ ಮನೆಯಲ್ಲಿ ಒಲೆ ಹಚ್ಚುವುದಿಲ್ಲ. ಕಡಲೆಹಿಟ್ಟು, ಅಕ್ಕಿಹಿಟ್ಟಿನ ಉಂಡೆ ಸೇರಿ ಹಲವು ರೀತಿಯ ಉಂಡೆ, ಹೆಸರು ಬೇಳೆ ಕೋಸಂಬರಿ ತಯಾರಿಸಿಕೊಳ್ಳಲಾಗುತ್ತದೆ. ನಂತರ ಹಿರಿಯರ ಸಮಾಧಿ ಬಳಿ ತೆರಳಿ ಅಲ್ಲಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡಲಾಗುತ್ತದೆ. ಎಲ್ಲರೂ ಅಲ್ಲೇ ಊಟ ಮಾಡುವ ಮೂಲಕ ಉಪವಾಸ ಕೈ ಬಿಡಲಾಗುತ್ತದೆ. ಮನೆಗೆ ಬಂದು ಮುದ್ದೆ, ಸಾಂಬಾರು ಮಾಡಿ ಊಟ ಮಾಡುತ್ತೇವೆ’ ಎನ್ನುತ್ತಾರೆ ಕಾರೇಹಳ್ಳಿ ಅಜಯ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT