ADVERTISEMENT

ಚಿತ್ರದುರ್ಗ: ಮಳೆಗೆ ತುಂಬಿ ಹರಿಯುತ್ತಿವೆ ಹಳ್ಳ, ಚೆಕ್ ಡ್ಯಾಮ್

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 3:55 IST
Last Updated 9 ಸೆಪ್ಟೆಂಬರ್ 2020, 3:55 IST
ತುಂಬಿ ಹರಿಯುತ್ತಿರುವ ಚೆಕ್‌ ಡ್ಯಾಮ್‌
ತುಂಬಿ ಹರಿಯುತ್ತಿರುವ ಚೆಕ್‌ ಡ್ಯಾಮ್‌   

ಚಿತ್ರದುರ್ಗ: ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದ್ದು, ಹಳ್ಳ ಹಾಗೂ ಚೆಕ್ ಡ್ಯಾಮ್ ಸೇರಿದಂತೆ ಹಲವು ಜಲಮೂಲಗಳು ತುಂಬಿ ಹರಿಯುತ್ತಿವೆ.

ಮಂಗಳವಾರ ರಾತ್ರಿ ಆರಂಭವಾದ ಮಳೆ ಬುಧವಾರ ನಸುಕಿನವರೆಗೂ ಎಡಬಿಡದೆ ಸುರಿದಿದೆ. ಹೊಸದುರ್ಗ, ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಧರ್ಮಪುರ ಸುತ್ತ ಭಾರಿ ಮಳೆ ಸುರಿದಿದೆ.

ಹಳ್ಳಗಳಲ್ಲಿ ನೀರು ಹರಿಯುತ್ತಿರುವುದನ್ನು ನೋಡಲು ಜನರು ತಂಡೋಪತಂಡವಾಗಿ ತೆರಳುತ್ತಿದ್ದಾರೆ. ತಗ್ಗು ಪ್ರದೇಶಗಳಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಶೇಂಗಾ ಸೇರಿ ಹಲವು ಬೆಳೆಗಳು ಜಲಾವೃತವಾಗಿವೆ. ಚೆಕ್ ಡ್ಯಾಮ್ ತುಂಬಿ ಹರಿಯುತ್ತಿರುವುದರಿಂದ ಜಲಪಾತದ ರೀತಿ ಕಾಣುತ್ತಿವೆ.

ADVERTISEMENT

ಬರದ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿರುವುದಕ್ಕೆ ರೈತರು ಹರ್ಷಗೊಂಡಿದ್ದಾರೆ. ಕಟಾವು ಹಂತ ತಲುಪಿದ ಈರುಳ್ಳಿಗೆ ಮಳೆ ಕೊಂಚ ಹಾನಿ ಮಾಡಿದೆ. ಹಿಂಗಾರು ಹಂಗಾಮು ಬೆಳೆಗೆ ಜಮೀನು ಹದಗೊಳಿಸಲು ರೈತರು ಉತ್ಸುಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.