ADVERTISEMENT

ಸಿರಿಗೆರೆ | ಗೃಹಜ್ಯೋತಿ ʻಜೀರೊʼ ಬಿಲ್ಲಿಂಗ್‌: ಗ್ರಾಹಕ ಸಂತಸ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2023, 15:54 IST
Last Updated 3 ಆಗಸ್ಟ್ 2023, 15:54 IST
ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆಯಡಿ ಸಿರಿಗೆರೆಯಲ್ಲಿ ಗುರುವಾರ ಶೂನ್ಯ ಬಿಲ್‌ ವಿತರಿಸಿದರು. ಶಾಖಾಧಿಕಾರಿ ಹೊನ್ನೂಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜಿ. ದೇವರಾಜ್‌, ಉಪ ಶಾಖಾಧಿಕಾರಿ ಮಲ್ಲಪ್ಪ ಇದ್ದರು
ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆಯಡಿ ಸಿರಿಗೆರೆಯಲ್ಲಿ ಗುರುವಾರ ಶೂನ್ಯ ಬಿಲ್‌ ವಿತರಿಸಿದರು. ಶಾಖಾಧಿಕಾರಿ ಹೊನ್ನೂಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜಿ. ದೇವರಾಜ್‌, ಉಪ ಶಾಖಾಧಿಕಾರಿ ಮಲ್ಲಪ್ಪ ಇದ್ದರು   

ಸಿರಿಗೆರೆ: ಐದು ಗ್ಯಾರಂಟಿಗಳಲ್ಲಿ ಒಂದಾದ 200 ಯೂನಿಟ್‌ವರೆಗೂ ಉಚಿತ ವಿದ್ಯುತ್‌ ಬಿಲ್‌ಗೆ ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ.

ಎರಡು ದಿನಗಳಿಂದ ಸಿರಿಗೆರೆಯ ವಿವಿಧ ಬಡಾವಣೆಗಳ 1,050 ಮನೆಗಳಿಗೆ ಮೀಟರ್‌ ಬಿಲ್‌ ನೀಡಲಾಗಿದ್ದು, ಗೃಹೋಪಯೋಗಿ ವಿದ್ಯತ್‌ ಮೀಟರ್‌ ಇರುವ ಎಲ್ಲರಿಗೂ ʻಜೀರೊʼ ಬಿಲ್‌ ನೀಡಲಾಗಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜನ್ಮ ದಿನದ ಪ್ರಯುಕ್ತ ಗೃಹಜ್ಯೋತಿ ಯೋಜನೆಯಡಿ ಬಿಲ್‌ ನೀಡಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜಿ. ದೇವರಾಜ್‌ ಗುರುವಾರ ಚಾಲನೆ ನೀಡಿದರು.

ADVERTISEMENT

ಸರ್ಕಾರದ ಈ ಯೋಜನೆಯಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದರು.

ಇದುವರೆಗೂ ಶೂನ್ಯ ದರದ ಬಿಲ್‌ಗಳನ್ನು ವಿತರಿಸಲಾಗಿದೆ. ಮೂರ್ನಾಲು ದಿನಗಳಲ್ಲಿ ಎಲ್ಲ ಮನೆಗಳಿಗೆ ಬಿಲ್‌ ನೀಡಲಾಗುವುದು ಎಂದು ಸಿರಿಗೆರೆ ಬೆಸ್ಕಾಂ ಶಾಖಾಧಿಕಾರಿ ಹೊನ್ನೂಜಿ ತಿಳಿಸಿದರು.

ಜುಲೈ 27ರವರೆಗೆ ನೋಂದಾಯಿಸಿಕೊಂಡಿರುವ ಗ್ರಾಹಕರಿಗೆ ಜೀರೊ ಬಿಲ್‌ ಬಂದಿದೆ. ನಂತರದಲ್ಲಿ ನೋಂದಾಯಿಸಿಕೊಂಡಿರುವವರು ಮುಂದಿನ ತಿಂಗಳಿನಿಂದ ಉಚಿತ ವಿದ್ಯುತ್‌ ಪಡೆಯಲಿದ್ದಾರೆ. ಗೃಹಜ್ಯೋತಿ ಯೋಜನೆಗೆ ಇದುವರೆಗೂ ನೋಂದಣಿ ಮಾಡಿಕೊಳ್ಳದವರು ಕೂಡಲೇ ಮಾಡಿಸಿಕೊಳ್ಳಬೇಕು ಎಂದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.