ADVERTISEMENT

ಚಿತ್ರದುರ್ಗ: ಹಿರೇಗುಂಟನೂರು ದ್ಯಾಮಲಾಂಭ ದೇವಿ ಜಾತ್ರಾ ಮಹೋತ್ಸವ ರದ್ದು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 13:39 IST
Last Updated 3 ಏಪ್ರಿಲ್ 2020, 13:39 IST

ಚಿತ್ರದುರ್ಗ: ಕೊರೊನಾ ಸೋಂಕು ತಡೆಯುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಹಿರೇಗುಂಟನೂರಿನ ದ್ಯಾಮಲಾಂಭ ದೇವಿ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ದ್ಯಾಮಲಾಂಭ ದೇವಸ್ಥಾನ ಕಮಿಟಿಯ ಧರ್ಮದರ್ಶಿ ಈ.ಚಂದ್ರಣ್ಣ ಮನವಿ ಮಾಡಿದ್ದಾರೆ.

ಅವರು ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಪ್ರತಿ ವರ್ಷದಂತೆ ಯುಗಾದಿ ಹಬ್ಬದ ನಂತರ ಹದಿನೈದು ದಿನಕ್ಕೆ ಅಂದರೇ ಏ.12ರಿಂದ ಪ್ರಾರಂಭವಾಗಿ ಏ.16 ಕ್ಕೆ ರಥೋತ್ಸವ ಮತ್ತು ಏ. 17ಕ್ಕೆ ಸಿಡಿ ಉತ್ಸವ ನಡೆಸಬೇಕೆಂದು ದೇವಸ್ಥಾನ ಕಮಿಟಿ ನಿರ್ಧರಿಸಿತ್ತು. ಆದರೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ, ತಹಸೀಲ್ದಾರ್ ಹಾಗೂ ಮುಜರಾಯಿ ಇಲಾಖೆ ಆದೇಶದಂತೆ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗುತ್ತಿದೆ. ಆದ್ದರಿಂದ ಭಕ್ತರು ಯಾವುದೇ ಕಾರಣಕ್ಕೂ ದೇವಸ್ಥಾನಕ್ಕೆ ಬಾರದೆ ಮನೆಯಲ್ಲೇ ಪೂಜೆ ಸಲ್ಲಿಸಿ ಮಹಾಮಾರಿ ಹೋಗಲಾಡಿಸಲು ಕೈ ಜೋಡಿಸಬೇಕೆಂದು ಎಂದು ಕಮಿಟಿ ಧರ್ಮದರ್ಶಿ ಈ.ಚಂದ್ರಣ್ಣ ಭಕ್ತರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT