ADVERTISEMENT

ಚಿತ್ರದುರ್ಗ | ಬೀದಿ ನಾಯಿ ದಾಳಿ: ಮಗು ಗಂಭೀರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 6:09 IST
Last Updated 19 ಅಕ್ಟೋಬರ್ 2019, 6:09 IST
ಬೀದಿನಾಯಿಗಳ ದಾಳಿಯಿಂದ ಮಗುಮೊಂದರ ಬೆನ್ನಿಗೆ, ಮತ್ತೊಂದು ಮಗುವಿನ ಮುಖಕ್ಕೆ ಗಾಯವಾಗಿದೆ.
ಬೀದಿನಾಯಿಗಳ ದಾಳಿಯಿಂದ ಮಗುಮೊಂದರ ಬೆನ್ನಿಗೆ, ಮತ್ತೊಂದು ಮಗುವಿನ ಮುಖಕ್ಕೆ ಗಾಯವಾಗಿದೆ.   

ಚಿತ್ರದುರ್ಗ: ಬೀದಿ ನಾಯಿಗಳ ಗುಂಪೊಂದು ದಾಳಿ ನಡೆಸಿ ಬಾಲಕಿಯೊಬ್ಬರನ್ನು ಗಂಭೀರವಾಗಿ ಗಾಯಗೊಳಿಸಿವೆ.

ಅಜಾದ್ ನಗರದ ಗೌಸಿಯಾ (4) ಗಾಯಗೊಂಡ ಬಾಲಕಿ. ಬಾಲಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ಬಾಲಕಿ ಬೆಳಿಗ್ಗೆ ಮನೆ ಸಮೀಪ ಇರುವಾಗ ನಾಲ್ಕು ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ಬಾಲಕಿಯನ್ನು ಎಳೆದೊಯ್ದು ಕಚ್ಚಿ ಗಾಯಗೊಳಿಸಿವೆ. ಇದನ್ನು ಗಮನಿಸಿದ ಜನರು ನಾಯಿಗಳನ್ನು ಓಡಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.

ADVERTISEMENT

ಬಾಲಕಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಾಲ್ಕು ದಿನಗಳ ಹಿಂದೆ ಜಮಿಲ್ (4) ಎಂಬ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿದ್ದವು. ಬೀದಿ ನಾಯಿ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಅಜಾದ್ ನಗರದ ಜನರು ನಗರಸಭೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.