
ಹೊಳಲ್ಕೆರೆ: ವಿದ್ಯಾರ್ಥಿಗಳು ಸಂವಿಧಾನದ ಮಹತ್ವ ಅರಿತು ಅದರ ಆಶಯದಂತೆ ಬದುಕಬೇಕು ಎಂದು ವಕೀಲ ಎಚ್. ಮೊಹಮದ್ ಇಮ್ರಾನ್ ತಿಳಿಸಿದರು.
ಪಟ್ಟಣದ ಎನ್‌ಇಎಸ್ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ನಡೆದ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
‘ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂಬುದು ಸಂವಿಧಾನದ ಆಶಯವಾಗಿದ್ದು, ಅದರ ಪರಿಪಾಲನೆ ಮಾಡಬೇಕು. ಕಾನೂನುಗಳನ್ನು ತಿಳಿಯುವುದು ಅಗತ್ಯವಾಗಿದ್ದು, ನಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ನ್ಯಾಯ ಪಡೆಯಲು ಎಲ್ಲರಿಗೂ ಅವಕಾಶ ಇದೆ. ವಿದ್ಯಾರ್ಥಿಗಳು ದೊಡ್ಡ ಗುರಿಯೊಂದಿಗೆ ಅಧ್ಯಯನ ಮಾಡಿದರೆ ಯಶಸ್ಸು ಸಿಗಲಿದೆ’ ಎಂದರು.
ಎಂಎಂ ಶಾಲೆಯ ಶಿಕ್ಷಕ ಮಾಲತೇಶ್, ಮಾರುತಿ, ಎನ್‌ಇಎಸ್ ಶಾಲೆಯ ಮುಖ್ಯಶಿಕ್ಷಕ ಜಿ. ಪ್ರಕಾಶ್, ಎನ್. ಕಾಂತರಾಜ್, ಜಿ.ಎಸ್. ಗಿರೀಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.