ADVERTISEMENT

ಹೊಸದುರ್ಗ: 38 ದನಕರು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 5:16 IST
Last Updated 22 ಏಪ್ರಿಲ್ 2022, 5:16 IST
ಹೊಸದುರ್ಗ ಪಟ್ಟಣದ ಗೌಸಿಯಾ ನಗರದ ಕಸಾಯಿಖಾನೆಯಲ್ಲಿದ್ದ ಗೋವುಗಳು.
ಹೊಸದುರ್ಗ ಪಟ್ಟಣದ ಗೌಸಿಯಾ ನಗರದ ಕಸಾಯಿಖಾನೆಯಲ್ಲಿದ್ದ ಗೋವುಗಳು.   

ಹೊಸದುರ್ಗ: ಪಟ್ಟಣದ ಗೌಸಿಯಾ ನಗರದಲ್ಲಿ ಪರವಾನಗಿ ಹೊಂದಿರದೇ ಅಕ್ರಮ ಕಸಾಯಿಖಾನೆಗಳಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ಹೊಸದುರ್ಗ ಪೊಲೀಸರು ದಾಳಿ ಮಾಡಿ ದನಕರುಗಳನ್ನು ವಶಪಡಿಸಿಕೊಂಡು ಗೋಶಾಲೆಗೆ ರವಾನಿಸಿದ್ದಾರೆ.

ಗೋ ಜ್ಞಾನ್‌ ಫೌಂಡೇಶನ್‌ನ ಎನ್.ಜಿ.ಒ ಒಂದು ನೀಡಿರುವ ದೂರಿನ ಅನ್ವಯ ಗುರುವಾರ ಬೆಳಿಗ್ಗೆ 7ಕ್ಕೆ ಗೌಸಿಯಾ ನಗರದ ಬೀದಿಗಳಲ್ಲಿ ಪೊಲೀಸರು ದಾಳಿ ಮಾಡಿ 38ಕ್ಕೂ ಹೆಚ್ಚು ದನಕರುಗಳನ್ನು ರಕ್ಷಿಸಿದರು. ‘ಕಸಾಯಿಖಾನೆಗಳಲ್ಲಿ ಅಕ್ರಮ ವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಅವುಗಳ ಹತ್ಯೆ ನಡೆಸಿ ಅದರ ರಕ್ತ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ಚರಂಡಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಹಾಕಲಾಗುತ್ತಿದೆ. ಇದರಿಂದ ಇಲ್ಲಿಯ ಜನ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿಯಲ್ಲಿದ್ದಾರೆ. ದನಕರುಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಬೇಕು. ಜೊತೆಗೆ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT