ADVERTISEMENT

ಹೊಸದುರ್ಗ | ರಸ್ತೆಯಲ್ಲಿ ಒಕ್ಕಣೆ, ವಾಹನ ಸವಾರರಿಗೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 7:00 IST
Last Updated 11 ಜನವರಿ 2026, 7:00 IST
ಹೊಸದುರ್ಗದ ಹಾಗಲಕೆರೆ ಗ್ರಾಮದ ರಸ್ತೆಯಲ್ಲಿ ಒಕ್ಕಣೆಗಾಗಿ ಹರಡುತ್ತಿರುವುದು
ಹೊಸದುರ್ಗದ ಹಾಗಲಕೆರೆ ಗ್ರಾಮದ ರಸ್ತೆಯಲ್ಲಿ ಒಕ್ಕಣೆಗಾಗಿ ಹರಡುತ್ತಿರುವುದು   

ಹೊಸದುರ್ಗ: ತಾಲ್ಲೂಕಿನಾದ್ಯಂತ ರಾಗಿ, ಹುರುಳಿ, ಸಾವೆ ಕಟಾವು ಮುಗಿದಿದ್ದು, ಒಕ್ಕಣೆ ಬಿರುಸಿನಿಂದ ಸಾಗಿದೆ. ಕೆಲ ರೈತರು ಬೆಳೆಗಳನ್ನು ಕಣದಲ್ಲಿ ಒಕ್ಕಣೆ ಮಾಡುವುದರ ಬದಲು ರಸ್ತೆ ಮಧ್ಯದಲ್ಲೇ ಈ ಕಾರ್ಯ ಆರಂಭಿಸಿದ್ದಾರೆ. ಇದರಿಂದ ವಾಹನ ಸವಾರಿರಿಗೆ ಕಿರಿಕಿರಿ ಆಗಿದ್ದು, ಅಪಘಾತದ ಭೀತಿಯಲ್ಲಿಯೇ ವಾಹನ ಚಲಾಯಿಸುವಂತಾಗಿದೆ.

ತಾಲ್ಲೂಕಿನ ಅಜ್ಜಿಕಂಸಾಗರ, ಹಾಗಲಕೆರೆ, ಕಾರೇಹಳ್ಳಿ, ಮತ್ತೋಡು, ಕಂಚೀಪುರ, ಕಿಟದಾಳ್ ಸೇರಿ ವಿವಿಧೆಡೆಗಳಲ್ಲಿ ಒಕ್ಕಣೆ ಕಾರ್ಯ ರಸ್ತೆ ಮಧ್ಯದಲ್ಲಿಯೇ ನಡೆಯುತ್ತಿದೆ.

ಹೆಚ್ಚು ವಾಹನಗಳು ಸಂಚರಿಸುವ ರಸ್ತೆಯಲ್ಲಿಯೇ ಒಕ್ಕಣೆ ಕಾರ್ಯ ನಡೆಯುತ್ತಿದೆ. ಬೆಳೆಗಳು ರಸ್ತೆ ತುಂಬೆಲ್ಲ ಹರಡಿರುತ್ತವೆ. ವಾಹನ ಸವಾರರು ಅನಿವಾರ್ಯವಾಗಿ ಬೆಳೆಗಳ ಮೇಲೆಯೇ ವಾಹನ ಚಲಾಯಿಸುವಂತಾಗಿದೆ. ಬೈಕ್ ಸವಾರರಂತೂ ಜೀವ ಬಿಗಿ ಹಿಡಿದುಕೊಂಡು ವಾಹನ ಚಲಾಯಿಸಬೇಕು. ಧಾನ್ಯದ ಮೇಲೆಯೇ ಬೈಕ್ ಚಲಾಯಿಸಿದರೆ, ಸ್ಪೀಡ್‌ನಲ್ಲಿ ವ್ಯತ್ಯಾಸವಾಗಿ ಬೇರೆಡೆ ಹೋಗಿದ್ದೂ ಇದೆ. ಇನ್ನೂ ಕೆಲವರು ಇದರಿಂದ ತಪ್ಪಿಸಲು ರಸ್ತೆಯ ಅಂಚಿನಲ್ಲಿಯೇ ವಾಹನ ಚಲಿಸಿಕೊಂಡು ಹೋಗುವಂತಾಗಿದೆ.

ADVERTISEMENT

‘ರಸ್ತೆ ಕಾಣದ ರೀತಿಯಲ್ಲಿ ಬೆಳೆ ಹರಡಿ ಒಕ್ಕಣೆ ಮಾಡಲಾಗುತ್ತಿದೆ. ಒಕ್ಕಣೆ ಮಾಡುವಾಗ ಬರುವ ದೂಳಿನ ಕಣಗಳು ಕಣ್ಣಿಗೆ ತಾಗಿ, ವಾಹನ ನಿಯಂತ್ರಣ ಕಳೆದುಕೊಳ್ಳುತ್ತಿವೆ. ಈ ಬಗ್ಗೆ ರೈತರು ತಲೆಕೆಡಿಸಿಕೊಳ್ಳುತ್ತಿಲ್ಲ. ರಸ್ತೆ ಏನೂ ನಿಮ್ಮ ಸ್ವಂತದ್ದಲ್ಲ ಎಂದು ವಾದ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋವಾಗುತ್ತಿಲ್ಲ’ ಎನ್ನುತ್ತಾರೆ ಬೈಕ್ ಸವಾರ ಈಶ್ವರ್. 

ಹೊಸದುರ್ಗದ ಮತ್ತೋಡಿಗೆ ಹೋಗುವ ಮಾರ್ಗದಲ್ಲಿ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.