ADVERTISEMENT

ದೊಗ್ಗನಾಳ್-ನುಲೇನೂರು ರಸ್ತೆ ಅಭಿವೃದ್ಧಿಗೆ ₹1 ಕೋಟಿ

ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಂ.ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 15:29 IST
Last Updated 30 ಜುಲೈ 2023, 15:29 IST
ಹೊಳಲ್ಕೆರೆ ತಾಲ್ಲೂಕಿನ ದೊಗ್ಗನಾಳ್‌ನಲ್ಲಿ ಭಾನುವಾರ ಶಾಸಕ ಎಂ. ಚಂದ್ರಪ್ಪ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು
ಹೊಳಲ್ಕೆರೆ ತಾಲ್ಲೂಕಿನ ದೊಗ್ಗನಾಳ್‌ನಲ್ಲಿ ಭಾನುವಾರ ಶಾಸಕ ಎಂ. ಚಂದ್ರಪ್ಪ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು   

ಹೊಳಲ್ಕೆರೆ: ದೊಗ್ಗನಾಳ್-ಆರ್. ನುಲೇನೂರು ರಸ್ತೆಗೆ ₹1 ಕೋಟಿ ಅನುದಾನ ನೀಡಲಾಗಿದೆ. ರಸ್ತೆ ನಿರ್ಮಿಸಬೇಕು ಎಂಬುದು ಈ ಭಾಗದ ಜನರ ಬೇಡಿಕೆಯಾಗಿತ್ತು ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ದೊಗ್ಗನಾಳ್‌ನಲ್ಲಿ ಭಾನುವಾರ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಂಗಾಪುರ-ಹನುಮಲಿ ರಸ್ತೆಗೂ ₹1 ಕೋಟಿ ಅನುದಾನ ನೀಡಿದ್ದೇನೆ. ಕಾಂಗ್ರೆಸ್ ಶಾಸಕರು ಅನುದಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮುಂದೆ ಗೋಗರೆಯುತ್ತಿದ್ದಾರೆ. ಈ ಸರ್ಕಾರದಲ್ಲೂ ಅನುದಾನ ತರುವುದು ನನಗೆ ಗೊತ್ತು. ತಾಲ್ಲೂಕಿನ ಅಭಿವೃದ್ಧಿಗೆ ಬದ್ಧ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ನಾಗರಾಜ್, ಸದಸ್ಯರಾದ ಆಶಾ ಪ್ರಕಾಶ್, ತುಪ್ಪದ ಹಳ್ಳಿ ಮಹೇಶ್ವರಪ್ಪ, ಕೃಷ್ಣಮೂರ್ತಿ, ರುದ್ರಪ್ಪ, ರಮೇಶ್‍ ಗೌಡ್ರು, ಡಿ.ಸಿ. ಮೋಹನ್, ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.