ADVERTISEMENT

ಧರ್ಮಪುರ: ಸಿಡಿ ಮದ್ದು ಕಚ್ಚಿ ಸಾಕು ನಾಯಿ ಸಾವು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 2:56 IST
Last Updated 13 ಫೆಬ್ರುವರಿ 2026, 2:56 IST
   

ಧರ್ಮಪುರ: ಸಮೀಪದ ಗೂಳ್ಯದಲ್ಲಿ ಬುಧವಾರ ಸಿಡಿಮದ್ದನ್ನು ಕಚ್ಚಿ ಸಾಕು ನಾಯಿ ಮೃತಪಟ್ಟಿದೆ.

ಹನುಮಂತರಾಯಪ್ಪ ಅವರ ಮನೆ ಆವರಣದಲ್ಲಿ ಬಿದ್ದಿದ್ದ ಸಿಡಿಮದ್ದನ್ನು ಸಾಕು ನಾಯಿ ಕಚ್ಚಿದೆ. ನಂತರ ಮದ್ದು ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡ ನಾಯಿ ಸ್ಥಳದಲ್ಲಿಯೇ ಮೃತಪಟ್ಟಿದೆ. ಈ ವೇಳೆ ಹನುಂತರಾಯಪ್ಪ ಸ್ಥಳದಲ್ಲಿಯೇ ಇದ್ದುದ್ದರಿಂದ ಆತಂಕಕ್ಕೆ ಒಳಗಾಗಿದ್ದಾರೆ. 

‘ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ನನ್ನ ಹತ್ಯೆಗೆ ಸಂಚು ರೂಪಿಸಿದ್ದು, ನಾಯಿಯ ಸಾವಿನ ಮೂಲಕ ಅದು ವಿಫಲವಾಗಿದೆ. ನಿಸ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಗುಡ್ಡಪ್ಪ, ಪಿಎಸ್ಐ ದೇವರಾಜು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ನಡೆಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.