ಧರ್ಮಪುರ: ಬೆಂಕಿ ಆಕಸ್ಮಿಕದಿಂದ ಮೂರು ಗುಡಿಸಲು, ಒಂದು ಹಸು ಸುಟ್ಟು ಕರಕಲಾಗಿರುವ ಘಟನೆ ಸಮೀಪದ ಮುಂಗುಸುವಳ್ಳಿಯಲ್ಲಿ ಬುಧವಾರ ನಡೆದಿದೆ.
ಮುಂಗುಸುವಳ್ಳಿಯ ಗೋವಿಂದಪ್ಪ, ಚಿಕ್ಕಣ್ಣ ಮತ್ತು ಶಿವಣ್ಣ ಇವರ ವಾಸದ ಗುಡಿಸಲುಗಳಿಗೆ ಬುಧವಾರ ಬೆಳಿಗ್ಗೆ ಸುಮಾರು ಹತ್ತು ಗಂಟೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣವಾಗಿ ಸುಟ್ಟು ಹೋಗಿವೆ. ಗುಡಿಸಲಿನಲ್ಲಿದ್ದ ಆಹಾರ ಪದಾರ್ಥಗಳು, ಕಾಗದ ಪತ್ರಗಳು, ಗೃಹಪಯೋಗಿ ವಸ್ತುಗಳು, ಬಂಗಾರ ಹಾಗೂ ನಗದು ಸುಟ್ಟು ಹೋಗಿದ್ದು, ಮೂರು ಕುಟುಂಬಗಳು ಬೀದಿಗೆ ಬಿದ್ದಿವೆ.
ಗೋವಿಂದಪ್ಪನವರ ಗುಡಿಸಲಿನ ಹಿಂದೆ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಗ್ರಾಮಸ್ಥರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಅಬ್ಬಿನಹೊಳೆ ಪಿಎಸ್ಐ ಬಾಹುಬಲಿ ಎಂ.ಪಡನಾಡ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.