ಬಂಧನ
(ಪ್ರಾತಿನಿಧಿಕ ಚಿತ್ರ)
ಧರ್ಮಪುರ: ಸಮೀಪದ ಹೂವಿನಹೊಳೆಯಲ್ಲಿ ಭಾನುವಾರ ಸಂಜೆ ಗಾಂಜಾ ಸೇವಿಸಿ ಗಲಾಟೆ ಮಾಡುತ್ತಿದ್ದ ಆರು ಜನ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಗಲಾಟೆ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಅಬ್ಬಿನಹೊಳೆ ಠಾಣೆ ಪಿಎಸ್ಐ ದೇವರಾಜ ಯುವಕರನ್ನು ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿದ್ದು ಗೊತ್ತಾಗಿದೆ.
ಹೂವಿನಹೊಳೆ ಗ್ರಾಮದ 22, 27 ವರ್ಷದ ಯುವಕರಾದ ಹಾಲೇಶ, ಗೋವಿಂದರಾಯ, ತಿಪ್ಪೇಸ್ವಾಮಿ, ವೆಂಕಟೇಶ, ಪ್ರಶಾಂತ ಹಾಗೂ ಮಾರುತಿ ಎಂಬವರನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಿಪಿಐ ಗುಡ್ಡಪ್ಪ, ಪ್ರೊಬೆಷನರಿ ಪಿಎಸ್ಐ ಹುಸೇನ್ ಸುಳಿಕೇರಿ, ಸಿಬ್ಬಂದಿ ನಾಗರಾಜ್, ರುದ್ರೇಶ್, ಕವಿರಾಜ್, ಬಬ್ಬೂರು ನಾಗರಾಜ್ ಕಾರ್ಯಾಚರಣೆಯಲ್ಲಿ ಇದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.