ಚಿತ್ರದುರ್ಗ: ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮದ ಬಳಿ ಸಾಧುಗಳ ವೇಷದಲ್ಲಿ ಬಂದು ರೈತರೊಬ್ಬರ ಚಿನ್ನದ ಉಂಗುರು ಕಳವು ಮಾಡಿದ್ದ ಐವರು ಕಳ್ಳರನ್ನು ತುರುವನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 50ರ ಬಳಿ ಕಾರಿನಲ್ಲಿ ರೈತ ರವಿಕುಮಾರ್ ಅವರ ಜಮೀನಿಗೆ ಬಂದರು. ಮೆಕ್ಕೆಜೋಳದ ತೆನೆ ತುಂಬಾ ಚೆನ್ನಾಗಿದ್ದು ಒಂದೆರಡನ್ನು ಮುರಿದುಕೊಳ್ಳುವುದಾಗಿ ತಿಳಿಸಿದರು. ನಂತರ ಭವಿಷ್ಯ ಹೇಳುವುದಾಗಿ ರವಿಕುಮಾರ್ ಅವರನ್ನು ಕರೆದು ಕಾರಿನಲ್ಲಿ ಕೂರಿಸಿಕೊಂಡರು. ನಂತರ ಉಂಗುರ ತೆಗೆದು ಬಾಯಿಯಲ್ಲಿ ಹಾಕಿಕೊಂಡು ರೈತನನ್ನು ಕೆಳಗಿಳಿಸಿ ಪರಾರಿಯಾಗಿದ್ದರು.
ರವಿಕುಮಾರ್ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಸಾಧುಗಳ ವೇಷದಲ್ಲಿದ್ದ ನಾಲ್ವರು ಕಳ್ಳರು, ಒಬ್ಬ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.