ADVERTISEMENT

ಚಿತ್ರದುರ್ಗ: ಗಂಡೋಬಳವ್ವ ನಾಗತಿ ಕಲಾಕೃತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 6:11 IST
Last Updated 10 ನವೆಂಬರ್ 2025, 6:11 IST
ಚಿತ್ರದುರ್ಗ ಸಂಸ್ಥಾನದ ರಾಣಿ ಗಂಡೋಬಳವ್ವ ನಾಗತಿಯ ಕಲಾಕೃತಿಯನ್ನು ಸಾಹಿತಿ ಬಿ.ಎಲ್‌.ವೇಣು ಅನಾವರಣಗೊಳಿಸಿ ಮಾತನಾಡಿದರು
ಚಿತ್ರದುರ್ಗ ಸಂಸ್ಥಾನದ ರಾಣಿ ಗಂಡೋಬಳವ್ವ ನಾಗತಿಯ ಕಲಾಕೃತಿಯನ್ನು ಸಾಹಿತಿ ಬಿ.ಎಲ್‌.ವೇಣು ಅನಾವರಣಗೊಳಿಸಿ ಮಾತನಾಡಿದರು   

ಚಿತ್ರದುರ್ಗ: ‘ದುರ್ಗದ ಇತಿಹಾಸದಲ್ಲಿ ಗಂಡೋಬಳವ್ವ ನಾಗತಿಯ ಸಾಹಸ, ಸೇವೆ ಅನನ್ಯವಾದುದು. ಸಮಯೋಚಿತವಾಗಿ ಯೋಜಿಸಿ ಮದಕರಿ ನಾಯಕನನ್ನು ರಾಜನಾಗಿ ಆಯ್ಕೆ ಮಾಡಿ, ಪಟ್ಟ ಕಟ್ಟಿ ಸಂಸ್ಥಾನವನ್ನು ಉಳಿಸಿದ ಕೀರ್ತಿ ಆಕೆಗೆ ಸಲ್ಲುತ್ತದೆ’ ಎಂದು ಹಿರಿಯ ಸಾಹಿತಿ ಬಿ.ಎಲ್‌. ವೇಣು ಹೇಳಿದರು.

ಚಿತ್ರದುರ್ಗ ಇತಿಹಾಸ ಕೂಟದ ಸದಸ್ಯರಾದ ಕುಮಾರ್ ಬಡಪ್ಪ ಅವರು ಕಲಾವಿದ ಸುಲ್ತಾನ್ ಅವರಿಂದ ಬರೆಸಿರುವ ಚಿತ್ರದುರ್ಗ ಸಂಸ್ಥಾನದ ರಾಣಿ ಗಂಡೋಬಳವ್ವ ನಾಗತಿಯ ಕಲಾಕೃತಿಯನ್ನು ಭಾನುವಾರ ಅನಾವರಣಗೊಳಿಸಿ ಮಾತನಾಡಿದರು.

‘ಗಂಡೋಬಳವ್ವ ನಾಗತಿ ಅನೇಕ ಯುದ್ಧಗಳನ್ನು ಎದುರಿಸಬೇಕಾಗುತ್ತದೆ. 1754–1756 ವರೆಗೆ ಸರ್ವಾಧಿಕಾರತ್ವ ನಡೆಸಿದ ಓಬಳವ್ವ ನಾಗತಿಯು 1756ರಲ್ಲಿ ಕಾಲವಾದಳು. ಈಕೆಯ ಶೌರ್ಯ, ದಿಟ್ಟತನ, ಹೋರಾಟ, ಸಮಯೋಚಿತ ಗುಣಸ್ವಭಾವ ಚಿತ್ರದುರ್ಗ ಇತಿಹಾಸದಲ್ಲಿ ದಾಖಲಾಗಿದೆ. ಆಕೆಯ ಶೌರ್ಯ, ಸಾಹಸಗಳು ಮುಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಮಾದರಿಯಾಗಬೇಕು’ ಎಂದರು.

ADVERTISEMENT

ನಗರಸಭೆಯ ಮಾಜಿ ಅಧ್ಯಕ್ಷರಾದ ಬಿ. ಕಾಂತರಾಜ್, ಕಲಾವಿದ ಸುಲ್ತಾನ್, ಮದಕರಿ ಸಂಘದ ಅಧ್ಯಕ್ಷರಾದ ಡಿ. ಗೋಪಾಲಸ್ವಾಮಿ ನಾಯಕ, ಚಿತ್ರದುರ್ಗ ಸಂಸ್ಥಾನದ ರಾಜವಂಶಸ್ಥ ಮದಕರಿ ಜಯಚಂದ್ರ ನಾಯಕ, ಇತಿಹಾಸ ಸಂಶೋಧಕ ಎನ್.ಎಸ್. ಮಹಂತೇಶ, ಅಜಯ್, ಕಣ್ಣನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.