ADVERTISEMENT

ಮತ್ತೋಡು: ₹ 5.25 ಲಕ್ಷ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 4:01 IST
Last Updated 24 ಏಪ್ರಿಲ್ 2021, 4:01 IST
ಹೊಸದುರ್ಗ ತಾಲ್ಲೂಕಿನ ನಾಗನಾಯಕನಕಟ್ಟೆಯಲ್ಲಿ ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ಬಾಳೆ ತೋಟಕ್ಕೆ ಹಾನಿಯಾಗಿರುವುದು.
ಹೊಸದುರ್ಗ ತಾಲ್ಲೂಕಿನ ನಾಗನಾಯಕನಕಟ್ಟೆಯಲ್ಲಿ ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ಬಾಳೆ ತೋಟಕ್ಕೆ ಹಾನಿಯಾಗಿರುವುದು.   

ಮತ್ತೋಡು (ಹೊಸದುರ್ಗ): ತಾಲ್ಲೂಕಿನ ಮತ್ತೋಡು ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಬಿರುಗಾಳಿ ಸಹಿತ ಸುರಿದ ಮಳೆಗೆ ₹ 5.25 ಲಕ್ಷ ಬೆಳೆ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಅಂದಾಜಿಸಿದೆ.

ನಾಗನಾಯಕನಕಟ್ಟೆ ತೋಳಚನಾಯ್ಕ, ಶಿವನಾಯ್ಕ, ಶಾರದಮ್ಮ, ಗೊಲ್ಲರಹಳ್ಳಿ ಪೂರ್ಣಮ್ಮ, ಚಿಕ್ಕಬ್ಯಾಲದಕೆರೆ ಹನುಮಂತಪ್ಪ, ಮಂಜಮ್ಮ, ವೈ.ಕೆ.ರವಿಕುಮಾರ್‌, ಕಿಟ್ಟದಾಳ್‌ ಕರಿಯಪ್ಪ ಅವರಿಗೆ ಸೇರಿದ 6,650 ಬಾಳೆ ಗಿಡಗಳು ನೆಲಕ್ಕುರುಳಿವೆ. ಗಂಜಿಗೆರೆಯಲ್ಲಿ ಸಿಡಿಲು ಬಡಿದಿದ್ದರಿಂದ ರೈತ ಚಂದ್ರಪ್ಪ ಅವರಿಗೆ ಸೇರಿದ್ದ ತೆಂಗಿನ ಮರ ಹೊತ್ತಿಕೊಂಡು ಉರಿದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT