ADVERTISEMENT

ಬಿರುಗಾಳಿಗೆ ಧರೆಗುರುಳಿದ ಬಾಳೆ

ಹಿರಿಯೂರು ತಾಲ್ಲೂಕಿನ ಮ್ಯಾಕ್ಲೂರಹಳ್ಳಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 3:59 IST
Last Updated 24 ಏಪ್ರಿಲ್ 2021, 3:59 IST
ಹಿರಿಯೂರು ತಾಲ್ಲೂಕಿನ ಮ್ಯಾಕ್ಲೂರಹಳ್ಳಿಯಲ್ಲಿ ಗುರುವಾರ ರಾತ್ರಿ ಬೀಸಿದ ಬಿರುಗಾಳಿಗೆ ಫಸಲಿಗೆ ಬಂದಿದ್ದ ಬಾಳೆ ಗಿಡಗಳು ನೆಲ ಕಚ್ಚಿರುವುದು.
ಹಿರಿಯೂರು ತಾಲ್ಲೂಕಿನ ಮ್ಯಾಕ್ಲೂರಹಳ್ಳಿಯಲ್ಲಿ ಗುರುವಾರ ರಾತ್ರಿ ಬೀಸಿದ ಬಿರುಗಾಳಿಗೆ ಫಸಲಿಗೆ ಬಂದಿದ್ದ ಬಾಳೆ ಗಿಡಗಳು ನೆಲ ಕಚ್ಚಿರುವುದು.   

ಮ್ಯಾಕ್ಲೂರಹಳ್ಳಿ (ಹಿರಿಯೂರು): ತಾಲ್ಲೂಕಿನ ಮ್ಯಾಕ್ಲೂರಹಳ್ಳಿಯಲ್ಲಿ ಗುರುವಾರ ರಾತ್ರಿ ಬೀಸಿದ ಬಿರುಗಾಳಿಗೆ ನಾಗರತ್ನಮ್ಮ ಎಂಬುವವರ ತೋಟದಲ್ಲಿ ಫಸಲಿಗೆ ಬಂದಿದ್ದ 500 ಬಾಳೆ ಗಿಡಗಳು ನೆಲಕ್ಕುರುಳಿವೆ.

‘ಯುಗಾದಿ ಹಬ್ಬದ ಸಮಯದಲ್ಲಿ ಒಂದಿಷ್ಟು ಬಾಳೆ ಕಟಾವು ಮಾಡಲಾಗಿತ್ತು. ನಿರೀಕ್ಷಿಸಿದಷ್ಟು ಬೆಲೆ ಸಿಗಲಿಲ್ಲ. ಬಸವ ಜಯಂತಿಗೆ ಉಳಿದ ಬಾಳೆಯನ್ನು ಕಟಾವು ಮಾಡುವ ಆಲೋಚನೆ ಇತ್ತು. ಶುಕ್ರವಾರ ಸಂಜೆ ಮಳೆಗಿಂತ ಬಿರುಗಾಳಿಯೇ ಜೋರಾಗಿ ಬೀಸಿದ್ದರಿಂದ ಬಹುತೇಕ ಬೆಳೆ ನೆಲಕಚ್ಚಿದೆ. ಬೇಸಾಯಕ್ಕೆ ಖರ್ಚು ಮಾಡಿದ ಹಣವೂ ಈಗ ಸಿಗದು’ ಎಂದು ನಾಗರತ್ನಮ್ಮ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT