ADVERTISEMENT

ಚಿತ್ರದುರ್ಗ: ಧಾರಾಕಾರ ಮಳೆ; ಶಾಲಾ ವಿದ್ಯಾರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 5:10 IST
Last Updated 3 ಸೆಪ್ಟೆಂಬರ್ 2025, 5:10 IST
ಚಿತ್ರದುರ್ಗದ ಪಂಚಾಚಾರ್ಯ ಕಲ್ಯಾಣ ಮಂಟಪದ ಮುಂದಿನ ರಸ್ತೆ ಮಳೆ ನೀರಿನಲ್ಲಿ ಮುಳುಗಿರುವುದು
ಚಿತ್ರದುರ್ಗದ ಪಂಚಾಚಾರ್ಯ ಕಲ್ಯಾಣ ಮಂಟಪದ ಮುಂದಿನ ರಸ್ತೆ ಮಳೆ ನೀರಿನಲ್ಲಿ ಮುಳುಗಿರುವುದು   

ಚಿತ್ರದುರ್ಗ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ  ಶಾಲೆಯಿಂದ ಮನೆಗೆ ಬರಬೇಕಾದ ವಿದ್ಯಾರ್ಥಿಗಳು ಪರದಾಡುವಂತಾಯಿತು.

ಮಧ್ಯಾಹ್ನ 3.30ಕ್ಕೆ ಆರಂಭವಾದ ಮಳೆ 4.30ರವರೆಗೂ ಸುರಿಯಿತು. 4 ಗಂಟೆಗೆ ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ಮನೆಗೆ ತೆರಳಲು ಸಾಧ್ಯವಾಗಲಿಲ್ಲ. ಶಾಲಾ ಆವರಣದಲ್ಲೇ ನಿಲ್ಲಬೇಕಾಯಿತು. ಮಕ್ಕಳನ್ನು ಕರೆದೊಯ್ಯಲು ಶಾಲಾ ಆವರಣಕ್ಕೆ ಬಂದಿದ್ದ ಪಾಲಕರು ಕೂಡ ಮಳೆಯಲ್ಲಿ ತೊಯ್ಯಬೇಕಾಯಿತು.

ಬೆಳಿಗ್ಗೆಯಿಂದ ಸಂಜೆಯವರೆಗೂ ತುಂತುರು ಮಳೆ ಇತ್ತು. ಮಧ್ಯಾಹ್ನವಾಗುತ್ತಲೇ ಬಿರುಸಿನ ಮಳೆ ಸುರಿಯಿತು. ನಗರದ ವಿವಿಧೆಡೆ ಚರಂಡಿಗಳು ತುಂಬಿ ಹರಿದವು. ರಸ್ತೆಗಳೇ ಚರಂಡಿಗಳಾಗಿದ್ದವು. ರಸ್ತೆಯಲ್ಲಿ ನೀರು ಹರಿಯುತ್ತಿದ್ದ ಕಾರಣ ವಾಹನ ಸವಾರರು ಪರದಾಡಬೇಕಾಯಿತು. ರಾಷ್ಟ್ರೀಯ ಹೆದ್ದಾರಿ ಸರ್ವೀಸ್‌ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.