
ಪ್ರಜಾವಾಣಿ ವಾರ್ತೆ
ಹಿರಿಯೂರು: ನಗರದ ಸರ್ಕಾರಿ ಪಿಯು ಕಾಲೇಜು ರಸ್ತೆಯ ನಿವಾಸಿ ಸಿದ್ದೇಶ್ವರಸ್ವಾಮಿ (84) ಸೋಮವಾರ ವಯೋಸಹಜ ಕಾಯಿಲೆಯಿಂದ ನಿಧನರಾದರು.
ಹಿರಿಯೂರಿನ ಗಿರೀಶ ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸಿದ್ದೇಶ್ವರಸ್ವಾಮಿ ಸೇವೆ ಸಲ್ಲಿಸಿದ್ದರು. ತಾಲ್ಲೂಕಿನ ಮೊದಲ ಮಹಿಳಾ ಪಿಯು ಕಾಲೇಜು ಅವರ ಅವಧಿಯಲ್ಲಿ ಆರಂಭಗೊಂಡಿತ್ತು.
ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮಂಗಳವಾರ ಬೆಳಿಗ್ಗೆ 11ಕ್ಕೆ ತಾಲ್ಲೂಕಿನ ಗನ್ನಾಯಕನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.