ADVERTISEMENT

ಹೊಳಲ್ಕೆರೆ: ಕೊಳವೆ ಬಾವಿ ಕೊರೆಯಲು ಅಡಿಗೆ ₹ 125 ನಿಗದಿ- ಲಾರಿ ಮಾಲೀಕರು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 2:58 IST
Last Updated 13 ಫೆಬ್ರುವರಿ 2026, 2:58 IST
<div class="paragraphs"><p>ಕೊಳವೆ ಭಾವಿ </p></div>

ಕೊಳವೆ ಭಾವಿ

   

ಹೊಳಲ್ಕೆರೆ: ಕೊಳವೆಬಾವಿ ಕೊರೆಯಲು ಒಂದು ಅಡಿಗೆ ₹ 125 ನಿಗದಿ ಮಾಡಲಾಗಿದೆ ಎಂದು ಬೋರ್ ವೆಲ್ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘದ ಮುಖಂಡ ಧ್ರುವಕುಮಾರ್ ತಿಳಿಸಿದರು.

ಲಾರಿ ಹಾಗೂ ಯಂತ್ರಗಳ ನಿರ್ವಹಣೆ ವೆಚ್ಚ ದುಬಾರಿಯಾಗಿದೆ. ಬೋರ್ ವೆಲ್ ಲಾರಿ ಖರೀದಿಸಲು ₹ 2 ಕೋಟಿ ಹಣ ಬೇಕು. ಯಂತ್ರೋಪಕರಣಗಳ ಬೆಲೆ ಶೇ 40 ರಷ್ಟು ದುಬಾರಿಯಾಗಿದ್ದು, ಕಾರ್ಮಿಕರ ಖರ್ಚು, ವೆಚ್ಚ ಮತ್ತು ವೇತನ ದುಪ್ಪಟ್ಟಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಬೋರ್ ವೆಲ್ ಲಾರಿ ಮಾಲೀಕರು ನಷ್ಟದ ಹಾದಿಯಲ್ಲಿದ್ದು, ಸಾಲ ಮಾಡಿ ಖರೀದಿ ಮಾಡಿದ ಲಾರಿಯ ಸಾಲದ ಕಂತು ಕಟ್ಟಲೂ ಆಗುತ್ತಿಲ್ಲ. ಆದ್ದರಿಂದ ಒಂದು ಅಡಿಗೆ ₹ 125 ದರ ಪಡೆಯಲು ತೀರ್ಮಾನಿಸಿದ್ದೇವೆ. 100 ಅಡಿಯ ನಂತರ 200 ಅಡಿಯವರೆಗೆ ₹ 130, 300 ಅಡಿವರೆಗೆ ₹ 135, 350 ಅಡಿವರೆಗೆ ₹ 145, 400 ಅಡಿವರೆಗೆ ₹ 175, 500 ಅಡಿವರೆಗೆ ₹ 215, 600 ಅಡಿವರೆಗೆ ₹ 250, 700 ಅಡಿವರೆಗೆ ₹345, 800 ಅಡಿವರೆಗೆ ₹ 445 ಹಣ ನಿಗದಿಪಡಿಸಲಾಗಿದೆ. 20 ಅಡಿ ಎಂಎಸ್‌ಗೆ ₹ 480, ಪಿವಿಸಿಗೆ ₹ 450, ಟಿಪಿಗೆ ₹ 2,500 ನಿಗದಿಪಡಿಸಿದೆ. ರೈತರು ಸಹಕರಿಸಬೇಕು ಎಂದು ಕೋರಿದರು.

ಲಾರಿ ಮಾಲೀಕರ ಸಂಘದ ಸದಸ್ಯ ನಾಚಿಮತ್ತು, ಜಗದೀಶ್, ಶ್ರೀನಿವಾಸ್, ಚೀರನಹಳ್ಳಿ ರಾಜೇಂದ್ರನ್, ಷಣ್ಮುಖಪ್ಪ, ಶಂಕರ್, ಕುಮಾರ್, ದಿಲೀಪ್, ಮೋಹನ್ ಹಾಗೂ ಬೋರ್ ವೆಲ್ ಏಜೆಂಟರ ಸಂಘದ ಮುಖಂಡ ಹನುಮಲಿ ಮಲ್ಲಿಕಾರ್ಜುನ್, ಧನು ಗುಂಡಸಮುದ್ರ, ಉಮೇಶ್ ಜಾಜೂರು, ನರೇಶ್ ರಾಮಗಿರಿ, ಪಾಂಡುಮಟ್ಟಿ ಪ್ರಕಾಶ್, ನಾಗರಾಜ್, ರಾಮಗಿರಿ ನಾಗರಾಜ್, ತಿಮ್ಮಯ್ಯ ತಾಳಿಕಟ್ಟೆ, ಮಧು ಬೆಟ್ಟಕಡೂರು, ಕೊಟ್ಟಿಗೆಹಳ್ಳಿ ಶಂಕ್ರಣ್ಣ, ದಿನೇಶ್ ಗುಂಡಿಮಡು, ನಟರಾಜ್ ದೊಗ್ಗನಾಡು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.