ADVERTISEMENT

ಹೊಳಲ್ಕೆರೆ: ಕೆಎಸ್ಆರ್‌ಟಿಸಿ ಬಸ್ ನೋಡಿ ಪಳಕಿತರಾದ ಉಪ್ಪಾರಹಟ್ಟಿ ಜನ

ಸಾರಿಗೆ ಸಂಪರ್ಕ ಇಲ್ಲದೆ ಕಂಗಾಲಾಗಿದ್ದ ಗ್ರಾಮಗಳಿಗೆ ಬಸ್ ಸೌಕರ್ಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 8:30 IST
Last Updated 2 ಡಿಸೆಂಬರ್ 2025, 8:30 IST
ಹೊಳಲ್ಕೆರೆ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಶಾಸಕ ಎಂ.ಚಂದ್ರಪ್ಪ ಸೋಮವಾರ ಚಾಲನೆ ನೀಡಿದರು.
ಹೊಳಲ್ಕೆರೆ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಶಾಸಕ ಎಂ.ಚಂದ್ರಪ್ಪ ಸೋಮವಾರ ಚಾಲನೆ ನೀಡಿದರು.   

ಹೊಳಲ್ಕೆರೆ: ಸಾರಿಗೆ ಸಂಪರ್ಕ ಇಲ್ಲದೆ ಕುಗ್ರಾಮಗಳಾಗಿಯೇ ಉಳಿದಿದ್ದ ತಾಲ್ಲೂಕಿನ ಹೊಸಹಟ್ಟಿ, ಉಪ್ಪಾರಹಟ್ಟಿ, ಕಡ್ಲಪ್ಪನಹಟ್ಟಿ, ಜಕ್ಕನಹಳ್ಳಿ, ಬೊಮ್ಮನಹಳ್ಳಿ ಗ್ರಾಮಗಳಿಗೆ ಸೋಮವಾರ ಕೆಎಸ್ಆರ್‌ಟಿಸಿ ಬಸ್ ಬಂದಿದ್ದು, ಬಸ್ ನೋಡಿ ಜನ ಪುಳಕಿತರಾದರು.

ಹೊಸ ಕೆಎಸ್ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಎಂ.ಚಂದ್ರಪ್ಪ ಸೋಮವಾರ ಚಾಲನೆ ನೀಡಿದರು.

‘ಚಿತ್ರದುರ್ಗದಿಂದ ಹೊರಡುವ ಬಸ್ ಹೊಳಲ್ಕೆರೆ, ಎನ್.ಜಿ. ಹಳ್ಳಿ, ಗೊಲ್ಲರಹಳ್ಳಿ, ಗೌಡಿಹಳ್ಳಿ, ಉಪ್ಪಾರ ಹಟ್ಟಿ, ಕಡ್ಲಪ್ಪನ ಹಟ್ಟಿ, ಬೊಮ್ಮನಹಳ್ಳಿ, ಬಾಗೂರು, ಹೊಸದುರ್ಗ ರೋಡ್ ಮೂಲಕ ಹೊಸದುರ್ಗ ಪಟ್ಟಣ ತಲುಪಲಿದೆ. ಮತ್ತೆ ಇದೇ ಮಾರ್ಗದಲ್ಲಿ ಚಿತ್ರದುರ್ಗಕ್ಕೆ ಸಂಚರಿಸಲಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಈ ಹಳ್ಳಿಗಳಿಗೆ ಬಸ್ ಸೌಕರ್ಯವೇ ಇರಲಿಲ್ಲ. ಇದರಿಂದ ರೈತರು, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಈಡಾಗಿದ್ದರು. ಜನರ ಸಮಸ್ಯೆ ಅರಿತು ಹೊಸ ಬಸ್ ಬಿಡಿಸಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಬಿಜೆಪಿ ಮಂಡಲ ಅಧ್ಯಕ್ಷ ರಾಮಗಿರಿ ಕುಮಾರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಂಗಾಧರ, ಪ್ರಭಾಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ದಾನವೇಂದ್ರ, ಶಶಿಧರ್, ನುಲೇನೂರು ಶೇಖರ್, ಮರುಳಸಿದ್ದಪ್ಪ, ಹಳ್ಳಪ್ಪ, ಹನುಮಂತಪ್ಪ, ಸತೀಶ್, ಸರಸ್ವತಿ, ಯಶೋಧಮ್ಮ, ಸೋಮಶೇಖರ್, ಲತಾ, ಗ್ರಾಮ ಪಂಚಾಯಿತಿ ಸದಸ್ಯರಾದ ಆಶಾ ಕುಮಾರ್, ಹನುಮಂತಪ್ಪ, ಮಂಜುಳ, ಗ್ರಾಮಸ್ಥರು ಹಾಗೂ ಕೆಎಸ್ಆರ್‌ಟಿಸಿ ಸಿಬ್ಬಂದಿ ಹಾಜರಿದ್ದರು.