ADVERTISEMENT

ಚಿತ್ರದುರ್ಗ | ಅಪಘಾತ: ಬೈಕ್ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 5:58 IST
Last Updated 23 ಸೆಪ್ಟೆಂಬರ್ 2025, 5:58 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಹೊಸದುರ್ಗ: ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದರಿಂದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗೂಡ್ಸ್ ವಾಹನದ ಚಾಲಕನಿಗೆ ಗಾಯಗಳಾಗಿರರುವ ಘಟನೆ ತಾಲ್ಲೂಕಿನ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ನೇರಲಕೆರೆ ಶ್ರೀರಾಂಪುರ ಮಧ್ಯೆ ಗರಿಂಬೀಳು ಗೇಟ್ ಬಳಿ ಸೋಮವಾರ ನೆಡೆದಿದೆ.

ADVERTISEMENT

ಮೃತ ವ್ಯಕ್ತಿಯನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕು ಗುಂಗುರುಬಾಗಿ ಗ್ರಾಮದ ರಂಗಸ್ವಾಮಿ (35) ಹಾಗೂ ಗಾಯಾಳು ಭರತ್ ಎಂದು ಗುರುತಿಸಲಾಗಿದೆ.

ಶ್ರೀರಾಂಪುರ ಕಡೆಯಿಂದ ಹೋಗುತ್ತಿದ್ದ ಗೂಡ್ಸ್ ವಾಹನ ಹಾಗೂ ಎಸ್.ನೇರಲಕೆರೆ ಗ್ರಾಮದ ಕಡೆಯಿಂದ ಬಂದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಗೂಡ್ಸ್ ವಾಹನದ ಗಾಜು ಒಡೆದು ಬೈಕ್ ಸವಾರ ವಾಹನದೊಳಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಶ್ರೀರಾಂಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.