ADVERTISEMENT

ಹೊಸದುರ್ಗ | ವಿಜೃಂಭಣೆಯ ವೀರಭದ್ರೇಶ್ವರ ಸ್ವಾಮಿ ಕೆಂಡಾರ್ಚನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:00 IST
Last Updated 25 ಫೆಬ್ರುವರಿ 2026, 6:00 IST
ಹೊಸದುರ್ಗದ ಗುಡ್ಡದನೇರಲಕೆರೆ ಸಮೀಪದ ದೊಡ್ಡವಜ್ಜೂರದಲ್ಲಿ ಮಂಗಳವಾರ ವೀರಭದ್ರೇಶ್ವರ ಸ್ವಾಮಿ ಹಾಗೂ ದಶರಥರಾಮೇಶ್ವರ ಸ್ವಾಮಿಯ ಕೆಂಡಾರ್ಚನೆ ನಡೆಯಿತು
ಹೊಸದುರ್ಗದ ಗುಡ್ಡದನೇರಲಕೆರೆ ಸಮೀಪದ ದೊಡ್ಡವಜ್ಜೂರದಲ್ಲಿ ಮಂಗಳವಾರ ವೀರಭದ್ರೇಶ್ವರ ಸ್ವಾಮಿ ಹಾಗೂ ದಶರಥರಾಮೇಶ್ವರ ಸ್ವಾಮಿಯ ಕೆಂಡಾರ್ಚನೆ ನಡೆಯಿತು   

ಹೊಸದುರ್ಗ: ತಾಲ್ಲೂಕಿನ ಗುಡ್ಡದನೇರಲಕೆರೆ ಗ್ರಾಮದ ಬೆಟ್ಟದ ತಪ್ಪಲು (ದೊಡ್ಡವಜ್ಜೂರ)ನಲ್ಲಿ ದಶರಥರಾಮೇಶ್ವರ ಸ್ವಾಮಿ ವೀರಗಾಸೆ ತಂಡದದ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ ವೀರಭದ್ರೇಶ್ವರ ಸ್ವಾಮಿ ಹಾಗೂ ದಶರಥರಾಮೇಶ್ವರ ಸ್ವಾಮಿಯ ಕೆಂಡಾರ್ಚನೆ ವಿಜೃಂಭಣೆಯಿಂದ ನಡೆಯಿತು.

ದಶರಥರಾಮೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಫೆ. 21ರಿಂದಲೇ ಆಯೋಜಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ವೀರಭದ್ರೇಶ್ವರ ಸ್ವಾಮಿಯ ಕೆಂಡಾರ್ಚನೆ ನಡೆಯಿತು. ಸಂಜೆ 5 ಗಂಟೆಗೆ ದಶರಥರಾಮೇಶ್ವರ ಸ್ವಾಮಿ, ಕಂಚಿವರದರಾಜ ಸ್ವಾಮಿ, ದಸೂಡಿ ಆಂಜನೇಯ ಸ್ವಾಮಿಯ ಸಮ್ಮುಖದಲ್ಲಿ 101 ಎಡೆ ಸ್ವೀಕಾರ ಕಾರ್ಯಕ್ರಮ ಧಾರ್ಮಿಕ ವಿಧಿಗಳನ್ವಯ ವೈಭವಯುತವಾಗಿ ನಡೆಯಿತು.

25ರಂದು ನಸುಕಿನ ಜಾವ ಭಕ್ತರ ಸಮ್ಮುಖದಲ್ಲಿ ದಶರಥರಾಮೇಶ್ವರ ಸ್ವಾಮಿಯ ರಥೋತ್ಸವ ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.