ಮೊಳಕಾಲ್ಮುರು: ‘ಮರಳು ಅಕ್ರಮ ದಂಧೆ ತಡೆಯುವುದು ಎಲ್ಲಾ ಇಲಾಖೆಗಳ ಹೊಣೆಯಾಗಿದ್ದು, ನುಣಿಚಿಕೊಳ್ಳದಂತೆ ಎಚ್ಚರ ವಹಿಸಬೇಕು’ ಎಂದು ಜಿಲ್ಲಾ ಉಪ ವಿಭಾಗಾಧಿಕಾರಿ ಮಹಿಬೂಬ್ ಜಿಲಾನ್ ಖುರೇಷಿ ಹೇಳಿದರು.
ತಾಲ್ಲೂಕು ಕಚೇರಿಯಲ್ಲಿ ಬುಧವಾರ ನಡೆದ ಮರಳು ತಾಲ್ಲೂಕು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಮರಳು ಅಕ್ರಮ ಸಾಗಣೆ ತಡೆಯುವುದು ಬರೀ ಕಂದಾಯ ಇಲಾಖೆ ಹೊಣೆ ಎಂಬ ಭಾವನೆ ಸರಿಯಲ್ಲ. ಸಮಿತಿಯಲ್ಲಿರುವ ಅರಣ್ಯ, ಲೋಕೋಪಯೋಗಿ, ಸಾರಿಗೆ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದಾಗಿದೆ. ಯಾವುದೇ ಕಾರಣಕ್ಕೂ ಅಕ್ರಮಕ್ಕೆ ಅವಕಾಶ ಕೊಡಬಾರದು’ ಎಂದರು.
ತಾಲ್ಲೂಕಿನಲ್ಲಿ 8 ಅನುಮತಿ ನೀಡಿರುವ ಮರಳು ಪಾಯಿಂಟ್‌ಗಳು ಇವೆ. ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮಾಹಿತಿ ಮೇರೆಗೆ 3 ತಿಂಗಳಲ್ಲಿ 26 ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ತಹಶೀಲ್ದಾರ್ ನಾಗವೇಣಿ, ತಾ.ಪಂ. ಇಒ ಎಚ್. ಹನುಮಂತಪ್ಪ, ಸಣ್ಣ ನೀರಾವರಿಯ ಮಂಜಪ್ಪ, ಲೋಕೋಪಯೋಗಿ ಇಲಾಖೆಯ ಲಕ್ಷ್ಮೀನಾರಾಯಣ್, ಸಾರಿಗೆ ಇಲಾಖೆಯ ಪ್ರಕಾಶ್ ಹಾಗೂ ಪಿಡಿಒಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.