ADVERTISEMENT

ಎಸ್‌ಎಸ್‌ಎಲ್‌ಸಿ: ಹೊಳಲ್ಕೆರೆ ತಾಲ್ಲೂಕಿಗೆ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 2 ಮೇ 2025, 15:58 IST
Last Updated 2 ಮೇ 2025, 15:58 IST
ಎಸ್.ಎನ್.ಬಾನು
ಎಸ್.ಎನ್.ಬಾನು   

ಹೊಳಲ್ಕೆರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 66.75ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ತಾಲ್ಲೂಕು ಪ್ರಥಮ ಸ್ಥಾನ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.

ಈ ಬಾರಿ 2,298 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,702 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.. ಬಿ.ದುರ್ಗದ ಇಂದಿರಾ ಗಾಂಧಿ ವಸತಿ ಶಾಲೆ, ಶಿವಗಂಗಾದ ವಿದ್ಯಾರತ್ನ ಶಾಲೆ, ದುಮ್ಮಿಯ ಜ್ಞಾನ ಜ್ಯೋತಿ ಪ್ರೌಢಶಾಲೆಗಳು ಶೇ 100 ಫಲಿತಾಂಶ ಪಡೆದಿವೆ.

ಚಿಕ್ಕಜಾಜೂರಿನ ಅಕ್ಷರ ವಿದ್ಯಾನಿಕೇತನ ಶಾಲೆಯ ಎಸ್.ಎನ್.ಭಾನು ಹಾಗೂ ರಾಮಗಿರಿ ಎಸ್ ಜೆಎಂ ಪ್ರೌಢಶಾಲೆಯ ಎಸ್.ಶೈಲಜಾ 622 (ಶೇ 99.52), ರಾಮಗಿರಿ ಎಸ್.ಜೆ.ಎಂ.ಪ್ರೌಢಶಾಲೆಯ ಟಿ.ಆರ್.ನಿಶ್ಚಿತಾ 619 (ಶೇ 99.04), ಅಕ್ಷರ ವಿದ್ಯಾನಿಕೇತನ ಶಾಲೆಯ ಜಯಲಕ್ಷ್ಮಿ ಹಾಗೂ ವಾಗ್ದೇವಿ ಶಾಲೆಯ ಅಪ್ಸಾ ಖಾನಂ 617 (ಶೇ 98.72) ಅಂಕ ಪಡೆದು ತಾಲ್ಲೂಕು ಟಾಪರ್ ಆಗಿದ್ದಾರೆ.

ADVERTISEMENT
ಎಸ್.ಶೈಲಜಾ
ಟಿ.ಆರ್.ನಿಶ್ಚಿತಾ
ಅಪ್ಸಾ ಖಾನಂ
ಜಯಲಕ್ಷ್ಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.