ಹೊಳಲ್ಕೆರೆ: ತಾವು ಕೆಲಸ ನಿರ್ವಹಿಸುತ್ತಿರುವ ಶಾಲೆಯ 35 ವಿದ್ಯಾರ್ಥಿಗಳಿಗೆ ತಲಾ ₹350 ಮೌಲ್ಯದ ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸುವ ಮೂಲಕ ಅಡುಗೆ ಸಹಾಯಕಿ ಮಾದರಿಯಾಗಿದ್ದಾರೆ.
ತಾಲ್ಲೂಕಿನ ಚೀರನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಹಾಯಕಿ ಶಾಂತಕುಮಾರಿ (ಶಾಂತಮ್ಮ) ಶಾಲೆಯ ಎಲ್ಲಾ ಮಕ್ಕಳಿಗೆ ಬ್ಯಾಗ್ ಕೊಡುಗೆಯಾಗಿ ನೀಡಿದ್ದಾರೆ. ಇವರ ಮಗ ಹಾಗೂ ಮಗಳು ಕೂಡ ಇದೇ ಶಾಲೆಯಲ್ಲಿ ಓದಿ ಈಗ ದುಡಿಯುವ ಹಂತಕ್ಕೆ ಬಂದಿದ್ದಾರೆ.
25 ವರ್ಷಗಳಿಂದ ಬಿಸಿಯೂಟ ತಯಾರಿಸುತ್ತಿರುವ ಶಾಂತಕುಮಾರಿ ಅವರಿಗೆ ಶಾಲೆಯ ವಿದ್ಯಾರ್ಥಿಗಳೆಂದರೆ ಅಕ್ಕರೆ. ಎರಡು ವರ್ಷಗಳ ಹಿಂದೆ ಮೊಮ್ಮಗನ ಹುಟ್ಟುಹಬ್ಬದ ದಿನ ಶಾಲೆಯ 65 ವಿದ್ಯಾರ್ಥಿಳಿಗೆ ನೋಟ್ ಬುಕ್ ಕೊಡುಗೆಯಾಗಿ ನೀಡಿದ್ದರು.
‘ಚೀರನಹಳ್ಳಿ ಸರ್ಕಾರಿ ಶಾಲೆ ಕಲಿಕೆಯ ವಿಷಯದಲ್ಲಿ ತಾಲ್ಲೂಕಿನಲ್ಲಿಯೇ ಹೆಚ್ಚು ಪ್ರಸಿದ್ಧಿ ಪಡೆದಿದೆ. ಶಾಲೆಯಲ್ಲಿ ಮೂವರು ಶಿಕ್ಷಕಿಯರಿದ್ದು, ಮಕ್ಕಳಿಗೆ ಚೆನ್ನಾಗಿ ಕಲಿಸುತ್ತಾರೆ. ಶಾಲೆಯ ಮಕ್ಕಳಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಬ್ಯಾಗ್ ವಿತರಿಸಿದ್ದೇನೆ. ಮುಂದೆಯೂ ನನಗೆ ಕೈಲಾದ ಕೊಡುಗೆ ನೀಡುತ್ತೇನೆ’ ಎಂದು ಶಾಂತಕುಮಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.