ADVERTISEMENT

ಲಕ್ಷ್ಮೀದೇವಿಯ ದೊಡ್ಡದೇವರ ಉತ್ಸವ

​ಪ್ರಜಾವಾಣಿ ವಾರ್ತೆ
Published 14 ಮೇ 2022, 2:20 IST
Last Updated 14 ಮೇ 2022, 2:20 IST
ಲಕ್ಷ್ಮಿದೇವಿ ಮೂರ್ತಿ
ಲಕ್ಷ್ಮಿದೇವಿ ಮೂರ್ತಿ   

ಧರ್ಮಪುರ: ಸಮೀಪದ ಪಿ.ಡಿ.ಕೋಟೆ ಛಲವಾದಿ ದಂಬಳದ ಕಟ್ಟೆ ಮನೆ ಲಕ್ಷ್ಮೀದೇವಿಯ ದೊಡ್ಡದೇವರ ಉತ್ಸವ ಶುಕ್ರವಾರ ಆರಂಭವಾಯಿತು.

ಮೇ 14ರಂದು ಜಲಧಿ ಪೂಜೆ, ಸಂಜೆ ಭಕ್ತರಿಂದಉಂಡೆ, ಮಂಡೆ ಮತ್ತು ಪೂಜಾರಿಯ ಪಟ್ಟಾಭಿಷೇಕ, ಮೇ 15ರಂದು ಮಹಾ ದಾಸೋಹ, ಸಂಜೆ ಜಾಡಿ ಕಾರ್ಯಕ್ರಮ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಬಳಿಕ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮವಿದ್ದು, ಮೈಸೂರು ಉರಿಲಿಂಗ ಪೆದ್ದೀಶ್ವರ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಉದ್ಘಾಟಿಸುವರು.

ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಸಭೆಯ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಕೃಷಿ ಸಚಿವ ಬಿ.ಸಿ. ಪಾಟೀಲ, ಮಾಜಿ ಸಚಿವರಾದಎಚ್.ಸಿ.ಮಹಾದೇವಪ್ಪ, ಡಿ. ಸುಧಾಕರ್, ಮೋಟಮ್ಮ, ರಾಜ್ಯಸಭಾ
ಮಾಜಿ ಸದಸ್ಯ ಎಚ್. ಹನುಮಂತಪ್ಪ, ನಿರ್ಮಿತಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಮೂಡಲಗಿರಿಯಪ್ಪ, ಎಸ್.ಆರ್.
ತಿಪ್ಪೇಸ್ವಾಮಿ, ತ್ರಿವೇಣಿ ಶಿವಪ್ರಸಾದಗೌಡ,ಪಿ.ಡಿ.ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಪುಟ್ಟಸ್ವಾಮಿಗೌಡ ಭಾಗವಹಿಸುವರುಎಂದು ದೇವಸ್ಥಾನ ಸಮಿತಿಯಆರ್. ಫಾಲಾಕ್ಷಪ್ಪ ಬಸಾಪುರ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.