ADVERTISEMENT

ಮೊಳಕಾಲ್ಮುರು: ಮಾವಿನ ತೋಪಿನಲ್ಲಿ ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 15:58 IST
Last Updated 11 ಮಾರ್ಚ್ 2025, 15:58 IST
ಮೊಳಕಾಲ್ಮುರಿನ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸೆರೆ ಹಿಡಿದಿರುವ ಚಿರತೆ
ಮೊಳಕಾಲ್ಮುರಿನ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸೆರೆ ಹಿಡಿದಿರುವ ಚಿರತೆ   

ಮೊಳಕಾಲ್ಮುರು: ತಾಲ್ಲೂಕಿನ ಅಮಕುಂದಿ ಸಮೀಪದ ಮಾವಿನ ತೋಪಿನಲ್ಲಿ ಅಡಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಯಶಸ್ವಿ ಕಾರ್ಯಾಚರಣೆ ನಡೆಸಿದರು.

ನಾಗೇಶ್‌ ಅವರಿಗೆ ಸೇರಿದ ಮಾವಿನ ತೋಪಿನಲ್ಲಿ ಚಿರತೆ ಕಾಣಸಿಕ್ಕಿದ್ದು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಆಗಮಿಸಿದ ಸಿಬ್ಬಂದಿ ಬಲೆ ಬೀಸಿ ಸತತ 2 ಗಂಟೆ ಕಾರ್ಯಾಚರಣೆ ನಡೆಸಿ ಬಲೆಗೆ ಬೀಳಿಸಿದರು.

ಸೆರೆ ಸಿಕ್ಕ ಚಿರತೆಯನ್ನು ಪಟ್ಟಣದ ಎಂ.ಡಿ. ಮಹಾದೇವಪ್ಪ ಸಸ್ಯಕ್ಷೇತ್ರಕ್ಕೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಬೋನಿಗೆ ಹಾಕಲಾಯಿತು. ನಂತರ ಚಿತ್ರದುರ್ಗದ ಆಡುಮಲ್ಲೇಶ್ವರ ಮೃಗಾಲಯಕ್ಕೆ ಕಳಿಸಿಕೊಡಲಾಯಿತು ಎಂದು ತಾಲ್ಲೂಕು ವಲಯ ಅರಣ್ಯಾಧಿಕಾರಿ ಶ್ರೀಹರ್ಷ ಮಾಹಿತಿ ನೀಡಿದರು.

ADVERTISEMENT

ಡಿವೈಆರ್‌ಎಫ್‌ಒ ತಿಪ್ಪೇಸ್ವಾಮಿ, ಪಶು ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಡಾ. ರಂಗಪ್ಪ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಸಂತೋಷ್‌ ಕುಮಾರ್‌, ಶಿವರಾಜ್‌, ನಾಗರಾಜ್‌ ಇದ್ದರು.

ಮೊಳಕಾಲ್ಮುರಿನ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸೆರೆ ಹಿಡಿದಿರುವ ಚಿರತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.