
ಪ್ರಜಾವಾಣಿ ವಾರ್ತೆ
ಮೊಳಕಾಲ್ಮುರು: ತಾಲ್ಲೂಕಿನ ಹಾನಗಲ್ ಸಮೀಪ ಹಳೆಕೆರೆ ಬಳಿ ಭಾನುವಾರ ಚಿರತೆ ಕಾಣಿಸಿಕೊಂಡಿದ್ದ ಪರಿಣಾಮ ಕೆಲಕಾಲ ಆತಂಕ ಸ್ಥಿತಿ ನಿರ್ಮಾಣವಾಗಿತ್ತು.
ಗ್ರಾಮಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿ 4 ಅಡಿಯಷ್ಟು ಎತ್ತರದ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ದೊಣ್ಣೆಗಳನ್ನು ಹಿಡಿದು ಓಡಿಸಲು ಮುಂದಾಗಿದ್ದಾರೆ. ಆಗ ಚಿರತೆ ಪ್ರತಿರೋಧ ತೋರಿದ್ದು, ಎದೆಗುಂದದೇ ಗ್ರಾಮಸ್ಥರು ಚಿರತೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘ಚಿರತೆ ಕಾಣಿಸಿಕೊಂಡ ನಂತರ ಗ್ರಾಮದಲ್ಲಿ ಆತಂಕ ಸ್ಥಿತಿ ಎದುರಾಗಿದೆ. ಮಕ್ಕಳು, ಮಹಿಳೆಯರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಬೋನು ಇಟ್ಟು ಚಿರತೆ ಸೆರೆ ಹಿಡಿಯಲು ಮುಂದಾಗಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.