ಚಿತ್ರದುರ್ಗ: ನಗರದ ಬಿ.ಡಿ ರಸ್ತೆಯಲ್ಲಿ ನೂತನವಾಗಿ ‘ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್’ ಆಭರಣ ಸಂಸ್ಥೆಯ ಮಾರಾಟ ಮಳಿಗೆ ಉದ್ಘಾಟನೆಗೊಂಡಿತು.
ರಾಜ್ಯದಲ್ಲಿ 40ನೇ ಮಳಿಗೆ ಇದಾಗಿದ್ದು, ಹೊಸ ಶೋರೂಂನಲ್ಲಿ ಮಾರ್ಚ್ 23ರವರೆಗೂ ಪ್ರತಿ ಚಿನ್ನಾಭರಣ ಖರೀದಿ ಮೇಲೆ ಬೆಳ್ಳಿಯ ನಾಣ್ಯ ಉಚಿತವಾಗಿ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹ್ಮದ್ ಮಾತನಾಡಿ ‘ಚಿತ್ರದುರ್ಗದಲ್ಲಿ ನಮ್ಮ ಹೊಸ ಶೋರೂಂ ಆರಂಭಿಸುತ್ತಿರುವುದಕ್ಕೆ ನಮಗೆ ಅತ್ಯಂತ ಸಂತಸವಾಗುತ್ತಿದೆ. ನಾವು ಇಂದಿನ ಅಗತ್ಯಗಳಿಗೆ ತಕ್ಕಂತೆ ಕೌಶಲ ಆಧಾರಿತ ವಿನ್ಯಾಸದ ಆಭರಣ ಮಾರಾಟ ಮಾಡುತ್ತೇವೆ. ಉತ್ಕೃಷ್ಟ ಗುಣಮಟ್ಟ, ನೈತಿಕ ವ್ಯವಹಾರ, ಗ್ರಾಹಕರ ತೃಪ್ತಿಗೆ ಆದ್ಯತೆ ನೀಡುತ್ತೇವೆ. ಬದ್ಧತೆಯೊಂದಿಗೆ ಚಿತ್ರದುರ್ಗದ ಜನರಿಗೆ ನಮ್ಮ ಅಸಾಧಾರಣ ಸಂಗ್ರಹಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ಇಲ್ಲಿಯ ಜನರು ಪ್ರೀಮಿಯಂ ಶಾಪಿಂಗ್ ಅನುಭವ ಪಡೆಯಬಹುದು’ ಎಂದರು.
‘ಗ್ರಾಹಕರಿಗೆ ಯಾವುದೇ ಲೋಪ ಇಲ್ಲದ ರೀತಿಯಲ್ಲಿ ಶಾಪಿಂಗ್ ಅನುಭವ ನೀಡುವ ನಿಟ್ಟಿನಲ್ಲಿ ಈ ಶೋರೂಂ ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ಸೊಗಸಾದ ಮತ್ತು ಪರಿಪೂರ್ಣವಾದ ಆಭರಣಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಗ್ರಾಹಕರಿಗೆ ಸೂಕ್ತವಾದ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳಲು ನುರಿತ ತಂಡ ಮಾರ್ಗದರ್ಶನ ಮಾಡಲಿದೆ. ಈ ಶೋರೂಂ ಆರಂಭದ ಮೂಲಕ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್, ವಿಶ್ವದ ಅತ್ಯಂತ ಆದ್ಯತೆಯ ಆಭರಣ ವ್ಯಾಪಾರಿ ಸಂಸ್ಥೆಯಾಗುವ ದೃಷ್ಟಿಕೋನ ಹೊಂದಿದ್ದೇವೆ’ ಎಂದರು.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥ ಫಿಲ್ಸರ್ ಬಾಬು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.