ಮೊಳಕಾಲ್ಮುರು: ವೀರಶೈವ ಲಿಂಗಾಯತ ಸಮಾಜವು ಸಂಘಟನೆಯಾಗುವ ಅಗತ್ಯ ದಿನೇ ದಿನೆ ಹೆಚ್ಚುತ್ತಿದೆ ಎಂದು ವೀರಶೈವ ಲಿಂಗಾಯತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ ಹೇಳಿದರು.
ಗುರುಭವನದಲ್ಲಿ ಶನಿವಾರ ನಡೆದ ಸಮಾಜದ ತಾಲ್ಲೂಕು ಸಮಾವೇಶ ಕುರಿತ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು.
‘ರಾಜ್ಯದ ಅಭಿವೃದ್ಧಿಯಲ್ಲಿ ನಮ್ಮ ಸಮಾಜದ ಕೊಡುಗೆ ಅನನ್ಯವಾಗಿದೆ. ಆದರೆ, ಸಮಾಜದ ಒಡಕಿನಿಂದ ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಪಡೆದುಕೊಳ್ಳಲು ಆಗದ ಅಸಹಾಯಕ ಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಸಂಘಟನೆಗೆ ಹೆಚ್ಚು ಆದ್ಯತೆ ನೀಡಿ ಹಲವು ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಜನಾಂಗದವರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಡಿ.ಮಂಜುನಾಥ್ ಮಾತನಾಡಿ, ‘ಕಳೆದ 3 ತಿಂಗಳಿನಿಂದ ಪ್ರತಿ ಗ್ರಾಮಗಳಲ್ಲಿ ಸಮಾಜದ ಸಭೆ ಆಯೋಜಿಸಿ ಸಂಘಟನೆ ಮಾಡಲಾಗುತ್ತಿದೆ. ಜಾಗೃತಿಗಾಗಿ ಫೆ. 15ರ ನಂತರ
ತಾಲ್ಲೂಕು ಮಟ್ಟದ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸಮಾವೇಶವನ್ನು ರಾಂಪುರದಲ್ಲಿ ಮಾಡಿದರೆ ಉತ್ತಮ ಎಂದು ಹಲವರು ಅಭಿಪ್ರಾಯ ತಿಳಿಸಿದ್ದು ಎಲ್ಲರ ಸಮ್ಮತಿ ಪಡೆದು ಸ್ಥಳ ಅಂತಿಮಗೊಳಿಸಲಾಗುವುದು’ ಎಂದರು.
ಸಮಾಜದ ಮುಖಂಡರಾದ ಟಿ.ರೇವಣ್ಣ, ವಿ.ಜಿ.ಪರಮೇಶ್ವರಪ್ಪ, ಎಂ.ಶಶಿಧರ್, ರೂಪಾ ವಿನಯಕುಮಾರ್, ನುಂಕೇಶ್ ಗೌಡ, ಎಂ.ಆರ್.ರಾಜು, ರುದ್ರಣ್ಣ, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.