
ಸಿರಿಗೆರೆ: ಭೀಮಸಮುದ್ರದ ಸುತ್ತ ಗಣಿಗಾರಿಕೆ ನಡೆಸುತ್ತಿರುವ ಉದ್ದಿಮೆದಾರರು ಅದಿರು ಸಾಗಿಸಲು ಸಾರ್ವಜನಿಕರ ರಸ್ತೆಯನ್ನು ಬಳಸದೇ, ಪ್ರತ್ಯೇಕ ರೈಲು ಮಾರ್ಗ ಪಡೆದುಕೊಳ್ಳಬೇಕು ಎಂದು ಶಾಸಕ ಹಾಗೂ ರೈತ ಹೋರಾಟಗಾರ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಗಣಿಗಾರಿಕೆಯಿಂದ ರೈತ ಸಮುದಾಯಕ್ಕೆ ಆಗುತ್ತಿರುವ ತೊಂದರೆಗಳನ್ನು ಪರಿಶೀಲಿಸಲು ಭೀಮಸಮುದ್ರಕ್ಕೆ ಶನಿವಾರ ಆಗಮಿಸಿದ್ದ ವೇಳೆ ಅವರು ಮಾತನಾಡಿದರು.
ಈ ಭಾಗದಲ್ಲಿ ದಿನವೂ 100ಕ್ಕೂ ಹೆಚ್ಚು ಲಾರಿಗಳು ಅದಿರು ಸಾಗಿಸುತ್ತಿವೆ. ಇಲ್ಲಿಯ ರಸ್ತೆಗಳು ಲಾರಿಗಳ ಓಡಾಟದಿಂದ ಹಾಳಾಗಿ ಹೋಗಿವೆ. ರೈತರ ಬೆಳೆಗಳಿಗೂ ತೊಂದರೆಯಾಗುತ್ತಿದೆ. ಉದ್ದಿಮೆದಾರರು ತಮ್ಮ ಸಿಎಸ್‌ಆರ್ ನಿಧಿ ಬಳಸಿ ರಸ್ತೆಗಳ ದುರಸ್ತಿ, ಗಣಿಭಾಗದ ಜನರ ಆರೋಗ್ಯ ಸಂರಕ್ಷಣೆಗೆ ಹೈಟೆಕ್ ಆಸ್ಪತ್ರೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶಾಲೆಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಉಪಾಧ್ಯಕ್ಷ ಭೂತಯ್ಯ, ಮಂಡ್ಯ ಜಿಲ್ಲೆಯ ರೈತ ಸಂಘದ ಮುಖಂಡ ಎ.ಎಲ್. ಕೆಂಪೇಗೌಡ, ಜಿಲ್ಲಾ ಘಟಕದ ಉಪಾಧ್ಯಕ್ಷ ಧನಂಜಯ್ ಹಂಪಯ್ಯನಮಾಳಿಗೆ, ರೈತ ಸಂಘದ ಅಧ್ಯಕ್ಷ ಶಂಕರ್ ಮೂರ್ತಿ, ಉಪಾಧ್ಯಕ್ಷ ಪೂರಿ ನಾಯಕ, ಮುಖಂಡರಾದ ಶಿವಕುಮಾರ್, ರಘು, ಪ್ರಸನ್ನ, ಕುಮಾರ್, ಈಶಣ್ಣ, ವೀರಣ್ಣ, ನಾಗರಾಜ್ ನಾಯಕ್, ಶೈಲೂ ಎಸ್. ಪಟೇಲ್, ಎಸ್.ಕೆ. ಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.