ADVERTISEMENT

ಮೊಳಕಾಲ್ಮುರು: ಕಟ್ಟಿ ಹಾಕಿ ಥಳಿಸಿ ಕಾರ್ಮಿಕನ ಕೊಲೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 6:24 IST
Last Updated 19 ಫೆಬ್ರುವರಿ 2026, 6:24 IST
   

ಮೊಳಕಾಲ್ಮುರು: ಸಮೀಪದ ಸೂಲೇನಹಳ್ಳಿ ಬಳಿಯ ಇಟ್ಟಿಗೆ ಭಟ್ಟಿಯೊಂದರಲ್ಲಿ ಬುಧವಾರ ಕಾರ್ಮಿಕರೊಬ್ಬರನ್ನು ಕೊಲೆ ಮಾಡಲಾಗಿದೆ.

ತುಮಕೂರ್ಲಹಳ್ಳಿ ಗ್ರಾಮದ ಓಬಣ್ಣ (50) ಕೊಲೆಯಾದ ವ್ಯಕ್ತಿ. ಟವೆಲ್‌ ಹಾಗೂ ಪಂಚೆಯಿಂದ ಓಬಣ್ಣನ ಕೈಕಾಲುಗಳನ್ನು ಟ್ರ್ಯಾಕ್ಟರ್‌ನ ಹಿಂಭಾಗಕ್ಕೆ ಕಟ್ಟಿ ಹಾಕಿ ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು, ಡಿವೈಎಸ್‌ಪಿ ಸತ್ಯನಾರಾಯಣ ಭೇಟಿ ನೀಡಿದರು.

ADVERTISEMENT

ಮೊಳಕಾಲ್ಮುರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.