ADVERTISEMENT

ಮುರಿಗಾಶ್ರೀ ಭಾವಚಿತ್ರ ಮೆರವಣಿಗೆ

ಮದಕರಿ ನಾಯಕ ವಂಶಸ್ಥರಿಂದ ಭಕ್ತಿಸರ್ಮಪಣೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 5:52 IST
Last Updated 6 ಅಕ್ಟೋಬರ್ 2022, 5:52 IST
ಚಿತ್ರದುರ್ಗದ ಪ್ರಮುಖ ರಸ್ತೆಯಲ್ಲಿ ಮುರಿಗಾ ಶಾಂತವೀರ ಸ್ವಾಮೀಜಿ ಅವರ ಭಾವಚಿತ್ರದ ಮೆರವಣಿಗೆಯನ್ನು ಬುಧವಾರ ನಡೆಸಲಾಯಿತು.
ಚಿತ್ರದುರ್ಗದ ಪ್ರಮುಖ ರಸ್ತೆಯಲ್ಲಿ ಮುರಿಗಾ ಶಾಂತವೀರ ಸ್ವಾಮೀಜಿ ಅವರ ಭಾವಚಿತ್ರದ ಮೆರವಣಿಗೆಯನ್ನು ಬುಧವಾರ ನಡೆಸಲಾಯಿತು.   

ಚಿತ್ರದುರ್ಗ: ವಿಜಯದಶಮಿ ಅಂಗವಾಗಿ ಮುರುಘಾ ಮಠದ ವತಿಯಿಂದ ನಗರದಲ್ಲಿ ಬುಧವಾರ ಮುರಿಗಾ ಶಾಂತವೀರ ಸ್ವಾಮೀಜಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ಮಠದ ಆವರಣದಿಂದ ಹೊರಟ ಮೆರವಣಿಗೆ ಐತಿಹಾಸಿಕ ಏಳು ಸುತ್ತಿನ ಕೋಟೆ ತಲುಪಿತು. ರಾಷ್ಟ್ರೀಯ ಹೆದ್ದಾರಿ, ದಾವಣಗೆರೆ ರಸ್ತೆ, ಗಾಂಧಿ ವೃತ್ತ, ಬಿ.ಡಿ.ರಸ್ತೆ, ಅಂಬೇಡ್ಕರ್‌ ವೃತ್ತ, ದೊಡ್ಡಪೇಟೆ ಮಾರ್ಗವಾಗಿ ಕಲ್ಲಿನ ಕೋಟೆ ತಲುಪಿತು. ಮೆರವಣಿಗೆಯಲ್ಲಿ ನೂರಾರು ದ್ವಿಚಕ್ರ ವಾಹನಗಳು ಪಾಲ್ಗೊಂಡಿದ್ದವು.

ಚಿನ್ಮೂಲಾದ್ರಿ ಮೇಲುದುರ್ಗದ ಮುರುಘಾಮಠದ ಅವರಣದ ಬಿಚ್ಚುಗತ್ತಿ ಭರಮಣ್ಣನಾಯಕ ವೇದಿಕೆಯಲ್ಲಿ ಚಿತ್ರದುರ್ಗದ ರಾಜವಂಶಸ್ಥರು ಮುರುಘಾ ಮಠಕ್ಕೆ ಭಕ್ತಿ ಸಮರ್ಪಣೆ ಮಾಡಿದರು.

ADVERTISEMENT

ರಾಜ ವಂಶಸ್ಥರಾದ ಪರುಶುರಾಮ ನಾಯಕ, ಪಿ.ಕಿರಣ್ ಕುಮಾರ್, ಪ್ರಸನ್ನಕುಮಾರ್, ವಸಂತಕುಮಾರ್ ಅವರು ಮುರುಘಾ ಮಠದ ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ ಅವರಿ ಭಕ್ತಿ ಸರ್ಮರ್ಪಿಸಿದರು.

‘ರಾಜ ವಂಶಸ್ಥರು ನೀಡುತ್ತಿರುವ ಗುರುಕಾಣಿಕೆ ಗುರು ಪರಂಪರೆಗೆ ನೀಡುವ ಗೌರವ. ಗುರುಗಳಿಗೆ ಮಠವನ್ನು ಕಟ್ಟಿ ಕೊಟ್ಟಿರುವ ಪರಂಪರೆಯನ್ನು ಯಾವ ರಾಜರು ಮಾಡಿಲ್ಲ. ಮದಕರಿನಾಯಕರು ಮಾಡಿರುವುದು ನೋಡಿದರೆ ವಂಶದ ಗೌರವಕ್ಕೆ ಗುರುಕಾಣಿಕೆ ಸಾಕ್ಷಿಯಾಗಿದೆ’ ಎಂದರು.

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ವಸ್ತ್ರಮಠ ಮಾತನಾಡಿ ದರು. ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್. ಲಿಂಗಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.