ADVERTISEMENT

ಮೀಸಲಾತಿ ರದ್ದತಿ ಅಪಾಯ ಇದೆ: ಸಂಗೀತ ನಿರ್ದೇಶಕ ಹಂಸಲೇಖ ಕಳವಳ

​ಪ್ರಜಾವಾಣಿ ವಾರ್ತೆ
Published 31 ಮೇ 2022, 12:25 IST
Last Updated 31 ಮೇ 2022, 12:25 IST
ಚಿತ್ರದುರ್ಗದ ಶಿವಶರಣ ಹರಳಯ್ಯ ಗುರುಪೀಠದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಬಸವ ವಾಹಿನಿಯ ಮುಖ್ಯಸ್ಥ ಕೃಷ್ಣಪ್ಪ ಅವರಿಗೆ 'ಶೀಲವಂತ ಪ್ರಶಸ್ತಿ', ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿಗೆ 'ಮಧುವರಸ ಪ್ರಶಸ್ತಿ’, ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ₹ 25 ಸಾವಿರ ನಗದು ಪುರಸ್ಕಾರದೊಂದಿಗೆ ‘ಹರಳಯ್ಯ ಪ್ರಶಸ್ತಿ’ ಹಾಗೂ ಅಮೃತ್ ಸಾವಯವ ಗೊಬ್ಬರದ ಸಂಸ್ಥಾಪಕ ನಾಗರಾಜ ಅವರಿಗೆ 'ಶ್ರೀಹರಳಯ್ಯ ಯುವ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಮಾಜಿ ಸಚಿವ ಎಚ್‌.ಆಂಜನೇಯ, ಹರಳಯ್ಯ ಸ್ವಾಮೀಜಿ, ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಇದ್ದಾರೆ.

ಚಿತ್ರದುರ್ಗ: ಮೂಲಭೂತ ಶಕ್ತಿಗಳು ಅಧಿಕಾರದಲ್ಲಿ ಮುಂದುವರಿದರೆ ಮೀಸಲಾತಿಯನ್ನು ರದ್ದುಪಡಿಸುವ ಅಪಾಯವಿದೆ. ಇದರ ವಿರುದ್ಧದ ಹೋರಾಟಕ್ಕೆ ಭೀಮ ಪರಿವಾರ ಸಜ್ಜಾಗಬೇಕಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಸಲಹೆ ನೀಡಿದರು.

ಇಲ್ಲಿನ ಮುರುಘಾ ಮಠದ ಅನುಭವ ಮಂಟಪದಲ್ಲಿ ಶಿವಶರಣ ಹರಳಯ್ಯ ಗುರುಪೀಠದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಶ್ರೀಮಹಾಶಿವಶರಣ ಹರಳಯ್ಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

‘ಮೂಲಭೂತ ಶಕ್ತಿಗಳು ಪಿತೂರಿ ಮಾಡುವುದನ್ನು ಕೈಬಿಡಬೇಕು. ಭೀಮ ಪರಿವಾರ ಜಾಗೃತವಾಗಿದ್ದು, ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ಒಂದು ಸತ್ಯವನ್ನು ಮಾತನಾಡಿದ್ದಕ್ಕೆ ನನ್ನಿಂದ ಕ್ಷಮೆ ಕೇಳಲಾಯಿತು. ಭೀಮ ಪರಿವಾರದ ಶಕ್ತಿಯೂ ಆಗ ಪ್ರದರ್ಶನಗೊಂಡಿತು’ ಎಂದು ಹೇಳಿದರು.

ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ‘ಬಸವಣ್ಣನವರನ್ನು ಕಲ್ಯಾಣದಿಂದ ಓಡಿಸಿದ್ದು ಮುಸ್ಲಿಮರು, ಕ್ರಿಶ್ಚಿಯನ್ನರಲ್ಲ. ಇದೇ ಸಂಪ್ರದಾಯವಾದಿಗಳು ಬಸವಣ್ಣನವರಿಗೆ ಕಿರುಕುಳ ನೀಡಿದರು. ಭಕ್ತರಿಗೆ ಸಂಸ್ಕೃತಿ ಕಲಿಸಿ, ಸಂಸ್ಕಾರ ನೀಡಿದ ಬಸವಣ್ಣ ಮಾಡಿದ ತಪ್ಪಾದರೂ ಏನು’ ಎಂದು ಪ್ರಶ್ನಿಸಿದರು.

‘ಇತ್ತೀಚೆಗೆ ರಾಜಕಾರಣಿಗಳು ಯುವಕರ ಕೈಗೆ ಕತ್ತಿ, ಹತಾರಗಳನ್ನು ನೀಡುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹ ಶಿಬಿರಗಳು ದೇಶದ ಎಲ್ಲೆಡೆ ನಡೆಯುತ್ತಿವೆ. ಯುವಕರಿಗೆ ಧರ್ಮದ ಅಫೀಮಿನ ಧ್ವಜಗಳನ್ನು ಕೊಡಬೇಡಿ. ಕಾಯಕ ಪ್ರಜ್ಞೆ, ದುಡಿಯುವ ಪೆನ್ನುಗಳನ್ನು ನೀಡಿ’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.