
ಮೆಣಸೂರು(ನರಸಿಂಹರಾಜಪುರ): ಮೆಣಸೂರು ಗ್ರಾಮದಲ್ಲಿರುವ ಸೇಂಟ್ ಸೆಬಾಸ್ಟೀನ್ ಚರ್ಚ್‌ನಲ್ಲಿ ಫೆ. 13 ಮತ್ತು 14ರಂದು ಹಬ್ಬದ ಮಹೋತ್ಸವ ನಡೆಯಲಿದೆ.
ಫೆ. 13ರಂದು ಸಂಜೆ 5ಕ್ಕೆ ಧ್ವಜಾರೋಹಣ, ನರಸಿಂಹರಾಜಪುರ ಎಲ್.ಎಫ್ ಕಥ್ರೆಡಲ್ ಚರ್ಚ್‌ನ ಫಾದರ್ ಟಿನೋ ವೆಳ್ಳಾರುಕಾಲಯಿಲ್ ಅವರಿಂದ ಗಾನದಿವ್ಯ ಬಲಿಪೂಜೆ ನಡೆಯಲಿದೆ.
ಫೆ. 14ರಂದು ಸಂಜೆ 4.30ಕ್ಕೆ ಭದ್ರಾವತಿ ಭೋದನ ಪಾಸ್ಟರಲ್ ಸೆಂಟರ್‌ನ ಫಾ. ಸುಭಿನ್ ಕಲಯಂಕಂಡತ್ತಿಲ್ ಅವರಿಂದ ದಿವ್ಯಗಾನ ಬಲಿಪೂಜೆ, ಸಂಜೆ 6ಕ್ಕೆ ಸೌತಿಕೆರೆ ಪೆಂಡಾಲ್‌ಗೆ ಮೆರವಣಿಗೆ ನಡೆಯಲಿದೆ. ನಂತರ, ಭೋಜನ ಕೂಟ ಹಮ್ಮಿಕೊಳ್ಳಲಾಗಿದ್ದು, ರಾತ್ರಿ 8.30ಕ್ಕೆ ಕೇರಳದ ಟಿ.ವಿಚಾನಲ್ ಕಲಾವಿದರಿಂದ ಕಲಾ ಸಂಧ್ಯಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹಬ್ಬದ ಮಹೋತ್ಸವದ ಪ್ರಯುಕ್ತ ಗ್ರಾಮಸ್ಥರು ಶುಕ್ರವಾರ ಶ್ರಮದಾನದ ಮೂಲಕ ಚರ್ಚ್ ಆವರಣ, ಮೆಣಸೂರು ಸರ್ಕಲ್ ವ್ಯಾಪ್ತಿಯನ್ನು ಸ್ವಚ್ಛಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.