ADVERTISEMENT

ಭರಮಸಾಗರ: ಮುಂಜಾವಿನ ಬನ್ನಿ ಪೂಜೆ ಆರಂಭ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 5:14 IST
Last Updated 21 ಅಕ್ಟೋಬರ್ 2020, 5:14 IST
ಭರಮಸಾಗರದಲ್ಲಿ ಮಹಿಳೆಯರು ಬನ್ನಿ ವೃಕ್ಷದ ಬಳಿ ಪೂಜೆ ನೆರವೇರಿಸಿದರು.
ಭರಮಸಾಗರದಲ್ಲಿ ಮಹಿಳೆಯರು ಬನ್ನಿ ವೃಕ್ಷದ ಬಳಿ ಪೂಜೆ ನೆರವೇರಿಸಿದರು.   

ಭರಮಸಾಗರ: ನವರಾತ್ರಿ ಅಂಗವಾಗಿ ಪಟ್ಟಣದ ಮಹಿಳೆಯರು ಪ್ರತಿದಿನ ಮುಂಜಾನೆ ಬನ್ನಿ ವೃಕ್ಷದ ಬಳಿ ಪೂಜೆ ಸಲ್ಲಿಸುತ್ತಿದ್ದಾರೆ.

ಅ. 17ರಿಂದ ಬನ್ನಿ ಪೂಜೆ ಆರಂಭಗೊಂಡಿದೆ. ಮಹಿಳೆಯರು ದೊಡ್ಡಕೆರೆ ಬಳಿ, ಎಸ್‌ಜೆಎಂ ಬಡಾವಣೆ, ಕೆ.ಇ.ಬಿ. ಕಚೇರಿ ಆವರಣ ಹಾಗೂ ಬಸವಣ್ಣ ದೇವಸ್ಥಾನದ ಬಳಿಯ ಬನ್ನಿ ವೃಕ್ಷದ ಬಳಿ ಮುಂಜಾವಿನ 3 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸುತ್ತಿದ್ದಾರೆ.

ವಿಜಯದಶಮಿಯಂದು ವೃತ ಕೈಗೊಂಡ ಮಹಿಳೆಯರು ಬನ್ನಿ ಮಾಂಕಾಳಿಗೆ ಮೊಸರನ್ನ, ಹೋಳಿಗೆ ನೈವೇಧ್ಯ ಸಮರ್ಪಿಸಿ ಪೂಜೆಯನ್ನು ಸಮಾಪ್ತಿಗೊಳಿಸುತ್ತಾರೆ.

ADVERTISEMENT

ನವರಾತ್ರಿ ದಿನದಲ್ಲಿ ಬನ್ನಿ ವೃಕ್ಷದಲ್ಲಿ ದೇವಿ ಇರುತ್ತಾಳೆ ಎಂಬ ನಂಬಿಕೆ ಇದೆ. ಇಷ್ಟಾರ್ಥ ಸಿದ್ಧಿಗಾಗಿ ಬ್ರಾಹ್ಮಿ ವೇಳೆಯಲ್ಲಿ ಏಕಚಿತ್ತದಿಂದ ಪೂಜಿಸುವುದರಿಂದ ದೇವಿ ಸಂಪನ್ನಳಾಗುತ್ತಾಳೆ ಎಂಬ ನಂಬಿಕೆ ಭಕ್ತರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.