
ನಾಯಕನಹಟ್ಟಿ: ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಗುರುವಾರ ಅಧ್ಯಕ್ಷ, ಉಪಾಧ್ಯಕ್ಷ ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಕೆ.ವಿ. ರಾಮಕೃಷ್ಣ, ಉಪಾಧ್ಯಕ್ಷ ಸ್ಥಾನಕ್ಕೆ ಕಾಕಸೂರಯ್ಯ ಸ್ಪರ್ಧಿಸಿದ್ದರು. ಅವರ ವಿರುದ್ಧ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಕ್ರಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಘೋಷಿಸಲಾಯಿತು.
ನಿರ್ದೇಶಕರಾಗಿ ಎ.ಟಿ. ಬಸವರಾಜ್, ಪ್ರತಾಪ್‌ರೆಡ್ಡಿ, ಡಿ.ಜಿ.ಗೋವಿಂದಪ್ಪ, ಎಚ್.ಬಿ. ತಿಪ್ಪೇಸ್ವಾಮಿ, ಕೆ.ಎನ್. ಕೆಂಗಣ್ಣ, ಶ್ರೀಧರ, ಎಂ. ಶಿವಾನಂದಪ್ಪ, ಐ. ಬಂಗಾರಪ್ಪ, ಕೆ. ಮುತ್ತಯ್ಯ, ಸಿ. ತಿಪ್ಪೇಸ್ವಾಮಿ, ಎಂ.ಎಸ್. ಬಸವರಾಜ, ಎ. ಪ್ರೇಮಕ್ಕ, ಆರ್. ಪ್ರತಿಭಾ ಆಯ್ಕೆಯಾದರು.
ಚಳ್ಳಕೆರೆ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಬಷೀರ್‌ಖಾನ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಸಿಬ್ಬಂದಿ ಪ್ರತಿಭಾ, ತಿಪ್ಪೇಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.