ADVERTISEMENT

ನಾಯಕನಹಟ್ಟಿ: ಗುರುತಿಪ್ಪೇರುದ್ರಸ್ವಾಮಿ ಹುಂಡಿಯಲ್ಲಿ ₹ 58 ಲಕ್ಷ ಸಂಗ್ರಹ

ಹುಂಡಿಯಲ್ಲಿ ಕಂಡು ಬಂದ ಬೆಳ್ಳಿ ಬಂಗಾರದ ಆಭರಣ, ಅಮೆರಿಕ ಕರೆನ್ಸಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 7:03 IST
Last Updated 30 ಅಕ್ಟೋಬರ್ 2025, 7:03 IST
ನಾಯಕನಹಟ್ಟಿ ಪಟ್ಟಣದ ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ದೇವಾಲಯಗಳಲ್ಲಿ ಬುಧವಾರ ಕಾಣಿಕೆ ಹುಂಡಿಗಳನ್ನು ತೆರೆಯಲಾಗಿದ್ದು, ಹಣ ಎಣಿಕೆ ಕಾರ್ಯದಲ್ಲಿ ತೊಡಗಿರುವ ಬ್ಯಾಂಕ್ ಸಿಬ್ಬಂದಿ 
ನಾಯಕನಹಟ್ಟಿ ಪಟ್ಟಣದ ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ದೇವಾಲಯಗಳಲ್ಲಿ ಬುಧವಾರ ಕಾಣಿಕೆ ಹುಂಡಿಗಳನ್ನು ತೆರೆಯಲಾಗಿದ್ದು, ಹಣ ಎಣಿಕೆ ಕಾರ್ಯದಲ್ಲಿ ತೊಡಗಿರುವ ಬ್ಯಾಂಕ್ ಸಿಬ್ಬಂದಿ    

ನಾಯಕನಹಟ್ಟಿ: ಐತಿಹಾಸಿಕ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ದೇವಾಲಯಗಳಲ್ಲಿ ಕಾಣಿಕೆ ಹುಂಡಿ ಹಣದ ಎಣಿಕೆ ಕಾರ್ಯವನ್ನು ಬುಧವಾರ ದೇವಾಲಯದ ಆವರಣದಲ್ಲಿ ಬ್ಯಾಂಕ್ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ನಡೆಸಲಾಯಿತು.

ಮೊದಲು ಹೊರಮಠ ದೇವಾಲಯದಲ್ಲಿ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಹಾಗೂ ಕಂದಾಯ ಇಲಾಖೆಯ ಶಿರಸ್ತೇದಾರ್ ಹಾಗೂ ದೇವಾಲಯ ಕಾರ್ಯ ನಿರ್ವಹಣಾಧಿಕಾರಿ, ಪೊಲೀಸರ ಸಮ್ಮುಖದಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಎಣಿಕೆ ಕಾರ್ಯ ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಯಿತು. ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಸಂಜೆ 4 ಗಂಟೆಗೆ ಮುಕ್ತಾಯವಾಯಿತು.

ಹೊರಮಠದಲ್ಲಿ ₹ 14.09,855, ಒಳಮಠದಲ್ಲಿ ₹ 44,64,695 ಹಣ ಸಂಗ್ರಹವಾಗಿದೆ. ಒಟ್ಟಾರೆ ನಾಲ್ಕು ತಿಂಗಳ ಅವಧಿಯಲ್ಲಿ ₹ 58,74,550 ಹಣ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು ದೇವಾಲಯದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು. ಹೊರಮಠ ಮತ್ತು ಒಳಮಠಗಳ ಹುಂಡಿಯಲ್ಲಿ ಹಲವು ಬೆಳ್ಳಿ ನಾಣ್ಯಗಳು, ಬೆಳ್ಳಿ ತೊಟ್ಟಿಲುಗಳು, ಬೆಳ್ಳಿ ಆಭರಣಗಳು, ಅಮೆರಿಕ ದೇಶದ ಕರೆನ್ಸಿಗಳು ಕಂಡು ಬಂದವು.

ADVERTISEMENT

ಕಾರ್ಯ ನಿರ್ವಹಣಾಧಿಕಾರಿ ಎಚ್.ಗಂಗಾಧರಪ್ಪ, ಶಿರಸ್ತೇದಾರ್ ಎಂ.ಎಂ.ಸದಾಶಿವಪ್ಪ, ಕಂದಾಯ ನಿರೀಕ್ಷಕ ಆರ್.ಚೇತನ್‌ಕುಮಾರ್, ಕಂದಾಯ ಇಲಾಖೆ ಸಿಬ್ಬಂದಿ ಎಚ್.ಎಸ್.ಜಗದೀಶ್, ಪುಷ್ಪಾವತಿ, ಅನಿಲ್, ಕೆನರಾ ಬ್ಯಾಂಕ್ ಅಧಿಕಾರಿಗಳಾದ ವಿತಿನ್, ವಿಜಯ್, ಶ್ರಾವಣಿ, ಬ್ಯಾಂಕ್‌ ಮಿತ್ರರಾದ ಎಂ.ಬಿ.ಮಹಾಸ್ವಾಮಿ, ಕೆ.ಎಂ.ಪ್ರಸನ್ನಕುಮಾರ್, ವೀರಭದ್ರಪ್ಪ, ಪುರಂದರ್, ಎಂ.ಬಿ.ವೆಂಕಟೇಶ್, ದೇಗುಲ ಸಿಬ್ಬಂದಿ ಎಸ್.ಸತೀಶ್, ರುದ್ರೇಶ್, ಮಂಜುನಾಥ, ಮಹಾದೇವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.