ADVERTISEMENT

ತುತ್ತಿನ ಚೀಲ ತುಂಬಿಸಿಕೊಳ್ಳಲು ಕಾಡು ಮೇಡು ಅಲೆದಾಟ

ಜೀವನಕ್ಕಾಗಿ ಬೇವಿನ ಬೀಜದ ಮೋರೆ ಹೋದ ಕೂಲಿ ಕಾರ್ಮಿಕರು

ತಿಮ್ಮಯ್ಯ .ಜೆ ಪರಶುರಾಂಪುರ
Published 7 ಜುಲೈ 2019, 19:45 IST
Last Updated 7 ಜುಲೈ 2019, 19:45 IST
ಬೇವಿನ ಬೀಜ ಆರಿಸುತ್ತಿರುವ ಕೂಲಿ ಕಾರ್ಮಿಕರು
ಬೇವಿನ ಬೀಜ ಆರಿಸುತ್ತಿರುವ ಕೂಲಿ ಕಾರ್ಮಿಕರು   

ಪರಶುರಾಂಪುರ: ಸತತ ಬರಗಾಲದಿಂದ ತತ್ತರಿಸಿ ಹೋಗಿರವ ಚಳ್ಳಕೆರೆ ತಾಲ್ಲೂಕಿನ ಜನರು, ತುತ್ತಿನ ಚೀಲ ತುಂಬಿಸಿಕೊಳ್ಳಲು ಊರೂರು, ಕಾಡು ಮೇಡು ಅಲೆಯುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ.

ಮಹಾತ್ಮಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆಯಡಿ ಬರಪೀಡಿತ ಪ್ರದೇಶಗಳಲ್ಲಿ 150 ದಿನಗಳ ಕೆಲಸ ಕೊಡಬೇಕೆಂಬ ಆದೇಶವಿದೆ. ಆದರೆ ಜನರಿಗೆ ಉದ್ಯೋಗವೂ ಇಲ್ಲ ಅವರ ಬದುಕಿಗೆ ಖಾತ್ರಿಯೂ ಇಲ್ಲದಂತಾಗಿದೆ. ಯಂತ್ರಗಳ ಮೂಲಕ ಉದ್ಯೋಗ ಖಾತ್ರಿ ಕೆಲಸ ಮಾಡಿ ಜನರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುತ್ತಾರೆ. ಅಲ್ಲಿಗೆ ಸರ್ಕಾರದ ಲೆಕ್ಕಕ್ಕೆ ಜನರಿಗೆ ಉದ್ಯೋಗ ಸಿಕ್ಕಂತಾಗುತ್ತದೆ. ಆದರೆ ವಾಸ್ತವವೇ ಬೇರೆ ಜನರಿಗೆ 100-200 ದುಡ್ಡು ಕೊಟ್ಟು ಅವರ ಖಾತೆಯಲ್ಲಿನ ಹಣವನ್ನ ಪಡಯುವವರೆ ಬೇರೆ ಹೀಗಿರುವಾಗ ಅನಿವಾರ್ಯವಾಗಿ ಜನರು ಬೇರೆ ಕೆಲಸಗಳನ್ನ ನೋಡಿಕೊಳ್ಳುವಂತಾಗಿದೆ.

ಬೇವಿನ ಬೀಜದ ಮೊರೆ ಹೋದ ಕೂಲಿ ಕಾರ್ಮಿಕ:

ADVERTISEMENT

ಮಳೆ ಇಲ್ಲದೆ ಬೆಳೆ ಇಲ್ಲ, ಹೀಗಾಗಿ ಕಾರ್ಮಿಕರಿಗೆ ಕೂಲಿ ಸಿಗದೇ ಜೀವನ ನಡೆಸುವುದೆ ದುಸ್ಥರವಾಗಿದೆ. ಕೆಲವರು ವಲಸೆ ಹೋದರೆ ಮತ್ತೆ ಕೆಲವರು ಊರೂರು ಅಲೆದು ಬೇವಿನ ಮರಗಳ ಕೆಳಗೆ ಬೀಜವನ್ನ ಆರಿಸಿ, ಮಾರಾಟ ಮಾಡಿ ಬಂದ ಹಣದಲ್ಲಿ ತಮ್ಮ ಮಕ್ಕಳ ನೋಟ್ ಪುಸ್ತಕ, ಬಟ್ಟೆ ಮತ್ತಿತರೆ ಅವಶ್ಯಕತೆಗಳನ್ನ ಪೂರೈಸಿಕೊಳ್ಳುವುದರ ಜೊತೆಗೆ ಮೂರೋತ್ತಿನ ಊಟ ಮಾಡಲು ಬೇವಿನ ಬೀಜಗಳೆ ಆಧಾರವಾಗಿವೆ ಎನ್ನುತ್ತಾರೆ ಹುಲಿಕುಂಟೆಯ ಬೋವಿ ಕಾಲೋನಿ ಕೂಲಿ ಕಾರ್ಮಿಕಾರದ ಕಮಲಮ್ಮ, ಹನುಮಕ್ಕ,ಯಲ್ಲಮ್ಮ, ತಿಪ್ಪೇಸ್ವಾಮಿ.

‘ದಿನಕ್ಕೆ 20ರಿಂದ 30 ಕೆಜಿ ಬೇವಿನ ಬೀಜ ಆರಿಸಿ, ಪರಶುರಾಂಪುರದ ವ್ಯಾಪರಿಗಳಿಗೆ ಮಾರಾಟ ಮಾಡಿ ಬರುವ ಹಣದಿಂದ ಜೀವನ ನಡೆಸುತ್ತಿದ್ದೇವೆ. 1 ಕೆಜಿ ಬೇವಿನ ಬೀಜಕ್ಕೆ ₹ 10. ದಿನವೊಂದಕ್ಕೆ ₹ 200ರಿಂದ ₹ 300ವರೆಗೆ ಸಂಪಾದನೆ ಮಾಡಿ ಮನೆ ತೂಗಿಸಿಕೊಂಡು ಹೋಗುತ್ತಿದ್ದೇವೆ’ ಎನ್ನುತ್ತಾರೆ ಅವರು.

ಕೂಲಿ ಕೆಲಸವಿಲ್ಲದೆ ಅನಿವಾರ್ಯವಾಗಿ ಬೇವಿನ ಬೀಜ ಆರಿಸು ಅಡವಿಗಳಲ್ಲಿ ಮರ ಮರಗಳಿಗೆ ಅಲೆದು ಬೀಜ ಸಂಗ್ರಹಿಸಿ ಬಂದ ಹಣದಿಂದ ಸಂಸಾರದ ರಥ ಎಳೆಯುತ್ತಿದ್ದೇವೆ.

**

ಬೇವಿನ ಬೀಜವನ್ನು ಸಾವಯವ ಗೊಬ್ಬರ ತಯಾರಯ ಮಾಡಲು ಬಳಸುವುದರಿಂದ ಅದಕ್ಕೆ ಬೇಡಿಕೆ ಇದೆ. ಹಾಗಾಗಿ ಬೇವಿನ ಬೀಜದ ವ್ಯಾಪಾರ ಮಾಡುತ್ತಿದ್ದೇನೆ.
- ಕುಮಾರ ವ್ಯಾಪರಸ್ಥ, ಪರಶುರಾಂಫುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.