ADVERTISEMENT

ಪವರ್ ಸ್ಟೇಷನ್ ಸ್ಥಾಪನೆಗೆ ₹ 850 ಕೋಟಿ: ಚಂದ್ರಪ್ಪ

ಪಂಪಾಪುರದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 6:11 IST
Last Updated 6 ಅಕ್ಟೋಬರ್ 2025, 6:11 IST
ಹೊಳಲ್ಕೆರೆ ತಾಲ್ಲೂಕಿನ ಪಂಪಾಪುರ ಗ್ರಾಮದಲ್ಲಿ ಭಾನುವಾರ ಶಾಸಕ ಎಂ.ಚಂದ್ರಪ್ಪ ₹75 ಲಕ್ಷ ವೆಚ್ಚದ ಚೆಕ್ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಹೊಳಲ್ಕೆರೆ ತಾಲ್ಲೂಕಿನ ಪಂಪಾಪುರ ಗ್ರಾಮದಲ್ಲಿ ಭಾನುವಾರ ಶಾಸಕ ಎಂ.ಚಂದ್ರಪ್ಪ ₹75 ಲಕ್ಷ ವೆಚ್ಚದ ಚೆಕ್ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.   

ಹೊಳಲ್ಕೆರೆ: ತಾಲ್ಲೂಕಿನಲ್ಲಿ ಪವರ್ ಸ್ಟೇಷನ್‌ಗಳನ್ನು ಸ್ಥಾಪಿಸಲು ₹850 ಕೋಟಿ ಅನುದಾನ ನೀಡಲಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ಪಂಪಾಪುರದಲ್ಲಿ ಭಾನುವಾರ ₹ 75 ಲಕ್ಷ ವೆಚ್ಚದ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ  ಮಾತನಾಡಿದರು.

‘ತಾಲ್ಲೂಕಿನಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕೊಳವೆ ಬಾವಿ ಹಾಗೂ ವಿದ್ಯುತ್ ಆಶ್ರಯಿಸಿದ್ದಾರೆ. ಇನ್ನು ಎರಡು, ಮೂರು ತಿಂಗಳಲ್ಲಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಭದ್ರಾ ನೀರು ಹರಿಯಲಿದ್ದು, ಅಂತರ್ಜಲ ಸಮಸ್ಯೆ ಕಡಿಮೆ ಆಗಲಿದೆ. ತಾಲ್ಲೂಕಿನ 17 ಕಡೆ ಪವರ್ ಸ್ಟೇಷನ್ ನಿರ್ಮಿಸಿದ್ದು, ಎನ್.ಜಿ.ಹಳ್ಳಿ, ತೇಕಲವಟ್ಟಿಯಲ್ಲಿರುವ ಸ್ಟೇಷನ್‌ಗಳು ಉದ್ಘಾಟನೆಗೆ ಸಿದ್ಧವಾಗಿವೆ. ಚಿಕ್ಕಜಾಜೂರು ಸಮೀಪದ ಕೋಟೆಹಾಳ್ ಸಮೀಪ ₹ 500 ಕೋಟಿ ವೆಚ್ಚದಲ್ಲಿ 400 ಕೆವಿ ಸಾಮರ್ಥ್ಯದ ವಿದ್ಯುತ್ ಸ್ವೀಕರಣಾ ಕೇಂದ್ರ ಸ್ಥಾಪಿಸಲಾಗುವುದು. ಅದು ಪೂರ್ಣಗೊಂಡರೆ ಮುಂದಿನ 20 ವರ್ಷ ವಿದ್ಯುತ್ ಸಮಸ್ಯೆ ಇರುವುದಿಲ್ಲ’ ಎಂದರು.

ADVERTISEMENT

‘ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಇಲ್ಲದಿದ್ದರೂ, ನಮ್ಮ ಕ್ಷೇತ್ರದಲ್ಲಿ ಮಾತ್ರ ಕಾಮಗಾರಿಗಳು ನಡೆಯುತ್ತಿವೆ. ಕ್ಷೇತ್ರದ 493 ಹಳ್ಳಿಗಳಲ್ಲೂ ಒಂದಲ್ಲ ಒಂದು ಕಾಮಗಾರಿ ನಡೆಯುತ್ತಿದೆ. ಗ್ರಾಮೀಣ ರಸ್ತೆಗಳಿಗೆ ನೂರಾರು ಕೋಟಿ ಅನುದಾನ ನೀಡಿದ್ದೇನೆ. ಮತಿಘಟ್ಟ, ರಾಮೇನಹಳ್ಳಿ, ಪಂಪಾಪುರ, ದಗ್ಗೆ, ನುಲೇನೂರು, ತೊಡರನಾಳು, ಲಿಂಗದಹಳ್ಳಿ ಮಾರ್ಗದ ರಸ್ತಗೆ ₹ 31 ಕೋಟಿ ಅನುದಾನ ನೀಡಿದ್ದೇನೆ. ಸಾಸಲು ಬಳಿ ₹ 100 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ’ ಎಂದು ಚಂದ್ರಪ್ಪ ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಉಮಾ ಶೇಖರಪ್ಪ, ಗೌರಮ್ಮ ರಂಗಸ್ವಾಮಿ, ಮಾಜಿ ಸದಸ್ಯ ಕರಿಯಪ್ಪ, ನಾಗರಾಜ್, ಎಲೆ ರಾಜಪ್ಪ, ರಂಗಪ್ಪ, ನಾಗಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪರಮೇಶ್ವರಪ್ಪ ಹಾಗೂ ಗ್ರಾಮದ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಲ್ಲೂಕಿನಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುವ 300ಕ್ಕೂ ಹೆಚ್ಚು ಕಡೆ ಚೆಕ್ ಡ್ಯಾಂ ಬ್ಯಾರೇಜ್ ನಿರ್ಮಿಸಲಾಗಿದೆ. ಇದರಿಂದ ಅಂತರ್ಜಲ ಹೆಚ್ಚಿ ಕೊಳವೆಬಾವಿಗಳಲ್ಲಿ ನೀರು ಸಂಗ್ರಹ ಆಗಲಿದೆ.
ಎಂ.ಚಂದ್ರಪ್ಪ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.