ADVERTISEMENT

ಅಪಘಾತದಿಂದ ಮಹಿಳೆ ಸಾವು; ಆರೋಪಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 9:49 IST
Last Updated 28 ಫೆಬ್ರುವರಿ 2020, 9:49 IST
   

ಚಿತ್ರದುರ್ಗ: ಅಪಘಾತ ಎಸಗಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ 1 ವರ್ಷ ಜೈಲು ಶಿಕ್ಷೆ, ₹ 11 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಶಿಕ್ಷೆಗೆ ಗುರಿಯಾದ ಆರೋಪಿ ಬಸ್ ಚಾಲಕ ಜಿ.ಟಿ. ಹರೀಶ್‌ಕುಮಾರ್, ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಹಾಗೂ ಜೆ.ಎನ್. ಕೋಟೆ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಹಾದು ಹೋಗಿರುವ ರಸ್ತೆ ಮಾರ್ಗದಲ್ಲಿ 2014ರ ಸೆಪ್ಟೆಂಬರ್ 29ರಂದು ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ
ಹೊಡೆದು ದೊಡ್ಡಸಿದ್ದವ್ವನಹಳ್ಳಿಯ ಪ್ರೇಮಕ್ಕ ಎಂಬುವವರು ಮೃತಪಟ್ಟಿದ್ದರು. ಈ ಕುರಿತು ಬಸ್ ಚಾಲಕನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಂಕರಪ್ಪ ಮಲ್ಲಾಶೆಟ್ಟಿ ಅವರು ಆರೋಪ ಸಾಬೀತಾದ ಕಾರಣ
ತೀರ್ಪು ನೀಡಿದ್ದಾರೆ. ಸಹಾಯಕ ಸರ್ಕಾರಿ ವಕೀಲರಾದ ಎಂ. ರೂಪಾ ವಾದ
ಮಂಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.