ADVERTISEMENT

ಹೊಸದುರ್ಗ: ರಾಗಿ ಬಣವೆಗೆ ಬೆಂಕಿ; ಅಪಾರ ನಷ್ಟ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:45 IST
Last Updated 3 ಫೆಬ್ರುವರಿ 2026, 5:45 IST
ಹೊಸದುರ್ಗದ ಶ್ರೀರಾಂಪುರ ಹೋಬಳಿಯ ಸೋಮೇನಹಳ್ಳಿಯಲ್ಲಿ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿರುವ ಬವಣೆ
ಹೊಸದುರ್ಗದ ಶ್ರೀರಾಂಪುರ ಹೋಬಳಿಯ ಸೋಮೇನಹಳ್ಳಿಯಲ್ಲಿ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿರುವ ಬವಣೆ   

ಹೊಸದುರ್ಗ: ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಸೋಮೇನಹಳ್ಳಿ ಗ್ರಾಮದ ನಾಲ್ಕು ಜನ ರೈತರಿಗೆ ಸೇರಿದ ತೆನೆ ಸಹಿತ ರಾಗಿ ಬಣವೆಗೆ ಸೋಮವಾರ ನಸುಕಿನ ಜಾವದಲ್ಲಿ ಆಕಸ್ಮಿಕ ತಗುಲಿ ಹೊತ್ತಿ ಉರಿದಿದೆ. ಅಪಾರ ನಷ್ಟವಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ.

ರಂಗಪ್ಪ, ಗಂಗಾಧರ, ಗೀತಮ್ಮ ಹಾಗೂ ರೇಣುಕಮ್ಮ ಇವರಿಗೆ ಸೇರಿದ ಬಣವೆ ಸಂಪೂರ್ಣವಾಗಿ ಭಸ್ಮವಾಗಿದೆ. ₹ ಲಕ್ಷ ಮೌಲ್ಯದ 30 ಲೋಡ್ ತೆನೆ ಸಹಿತ ಹುಲ್ಲು ಭಸ್ಮವಾಗಿದೆ.

‘ಜಾತ್ರೆ ಮುಗಿಸಿ ಸುಗ್ಗಿ ಮಾಡಬೇಕೆಂದು ಹಾಗೆ ಉಳಿಸಿಕೊಂಡಿದ್ದೆವು. ಇನ್ನೊಂದೆರಡು ದಿನಗಳಲ್ಲಿ ಸುಗ್ಗಿ ಮಾಡಬೇಕಿತ್ತು. ಅಷ್ಟರಲ್ಲಿ ಹೀಗಾಗಿದೆ. ಇಷ್ಟು ದಿನ ಕಷ್ಟಪಟ್ಟಿದ್ದು, ಒಂದೇ ಗಂಟೆಯಲ್ಲೇ ವ್ಯರ್ಥವಾಗಿ ಹೋಗಿದೆ. ಮನೆಯಲ್ಲಿ ರಾಗಿಯೂ ಸಹ ಇಲ್ಲ. ದನಕರುಗಳಿಗೂ ಮೇವಿಲ್ಲ’ ಎಂದು ರೈತ ರಂಗಪ್ಪ ಅಳಲು ತೋಡಿಕೊಂಡರು.

ADVERTISEMENT

ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಎಚ್. ಬಸವರಾಜಪ್ಪ, ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.