ADVERTISEMENT

ಚಿತ್ರದುರ್ಗ: ರೈಲು ಸೇವೆಯಲ್ಲಿ ಭಾಗಶಃ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 13:12 IST
Last Updated 27 ಸೆಪ್ಟೆಂಬರ್ 2021, 13:12 IST
ರೈಲು ಸೇವೆ
ರೈಲು ಸೇವೆ   

ಚಿತ್ರದುರ್ಗ: ಇಲ್ಲಿನ ರೈಲು ನಿಲ್ದಾಣದಲ್ಲಿ ತೂಕದ ಯಂತ್ರವನ್ನು ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡ ಪರಿಣಾಮ ಸೆ.28ರಿಂದ ಅ.17ರವರೆಗೆ ರೈಲು ಸೇವೆಯಲ್ಲಿ ಭಾಗಶಃ ವ್ಯತ್ಯಯವಾಗಲಿದೆ.

ಕೆಲ ರೈಲುಗಳು ಚಿತ್ರದುರ್ಗ ರೈಲು ನಿಲ್ದಾಣಕ್ಕೆ ಬರುವ ಬದಲು ಚಿಕ್ಕಜಾಜೂರಿನಿಂದಲೇ ಸೇವೆ ಒದಗಿಸಲಿವೆ. ಚಿತ್ರದುರ್ಗ ರೈಲು ನಿಲ್ದಾಣದ ಮೂಲಕ ಸಾಗುವ ರೈಲುಗಳ ನಿಲುಗಡೆಯನ್ನು ರದ್ದುಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್‌ಪ್ರೆಸ್ ರೈಲು ಚಿತ್ರದುರ್ಗ ರೈಲು ನಿಲ್ದಾಣಕ್ಕೆ ಬರುವುದಿಲ್ಲ. ಬದಲಿಗೆ ಚಿಕ್ಕಜಾಜೂರು ರೈಲು ನಿಲ್ದಾಣದಿಂದಲೇ ಪ್ರಯಾಣಿಕರಿಗೆ ಸೇವೆ ನೀಡಲಿದೆ. ಚಿಕ್ಕಜಾಜೂರಿನಿಂದ ಸಂಚಾರ ಆರಂಭಿಸಿ ಹುಬ್ಬಳ್ಳಿಗೆ ತೆರಳಲಿದೆ. ಬಳಿಕ ಅಲ್ಲಿಂದ ಹೊರಟು ಚಿಕ್ಕಜಾಜೂರಿನಲ್ಲಿ ಕೊನೆಗೊಳ್ಳಲಿದೆ.

ADVERTISEMENT

ಬೆಂಗಳೂರು–ಹೊಸಪೇಟೆ, ಹೊಸಪೇಟೆ–ಬೆಂಗಳೂರು ರೈಲು 20 ದಿನಗಳ ಕಾಲ ಚಿತ್ರದುರ್ಗ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುವುದಿಲ್ಲ. ಯಶವಂತಪು– ಜೈಪುರ ಸುವಿಧಾ ವಿಶೇಷ ರೈಲು, ಮೈಸೂರು–ಶಿರಡಿ ಸಾಯಿನಗರ ರೈಲು, ಮೈಸೂರು–ವಾರಣಸಿ ಎಕ್ಸ್‌ಪ್ರೆಸ್‌ ವಿಶೇಷ ರೈಲುಗಳು ಚಿತ್ರದುರ್ಗ ರೈಲ್ವೆ ನಿಲ್ದಾಣಕ್ಕೆ ಸೇವೆ ಒದಗಿಸುವುದಿಲ್ಲ ಎಂದು ನೈಋತ್ಯ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಮಂಜುನಾಥ್ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.