ಚಿಕ್ಕಜಾಜೂರು: ಚಿಕ್ಕಜಾಜೂರು ಸೇರಿದಂತೆ ಹೋಬಳಿಯ ವಿವಿಧ ಕಡೆಗಳಲ್ಲಿ ಭಾನುವಾರ ಮಧ್ಯಾಹ್ನ ಬಿರುಸಿನ ಮಳೆಯಾಯಿತು.
ನಾಲ್ಕು ದಿನಗಳಿಂದ ಬಿಡುವು ನೀಡಿದ್ದ ಮಳೆ, ಮಧ್ಯಾಹ್ನ ಅಂದಾಜು ಅರ್ಧ ಗಂಟೆ ಬಿರುಸಾಗಿ ಸುರಿಯಿತು. ಇದರಿಂದಾಗಿ ರಾಗಿ ಬಿತ್ತನೆಗೆ ಮತ್ತೆ ಹಿನ್ನಡೆಯುಂಟಾಗಿದೆ. ಶನಿವಾರವೂ 25 ನಿಮಿಷ ಮಳೆ ಸುರಿದಿತ್ತು.
ಹೋಬಳಿಯ ಬಹುತೇಕ ಕಡೆಗಳಲ್ಲಿ ಮೆಕ್ಕೆಜೋಳಕ್ಕೆ ಹಾನಿಯಾಗಿದ್ದು, ಅದನ್ನು ತೆಗೆದುಹಾಕಿ, ರಾಗಿ ಬಿತ್ತನೆ ಮಾಡುವ ಚಿಂತನೆಯಲ್ಲಿ ರೈತರಿದ್ದರು. ಕೆಲವರು ಈಗಾಗಲೇ ಬಿತ್ತನೆಗೆ ಸಜ್ಜಾಗಿದ್ದರು. ಆದರೆ ಎರಡೂ ದಿನ ಮಳೆಯಾಗಿದ್ದರಿಂದ ಬಿತ್ತನೆಗೆ ಹಿನ್ನಡೆಯಾಗಿದೆ.
‘ಮಳೆ ಮತ್ತೆ ಬಿಡುವು ನೀಡುವವರೆಗೆ ಕಾಯಬೇಕು. ಅತ್ತ ಮೆಕ್ಕೆಜೋಳವೂ ಕೈಗೆ ಸಿಗಲಿಲ್ಲ. ರಾಗಿಯನ್ನಾದರೂ ಬಿತ್ತೋಣ ಎಂದರೆ ಮಳೆ ಬಿಡುತ್ತಿಲ್ಲ. ಮಳೆ ಹೀಗೆಯೇ ಬಂದರೆ, ಈ ವರ್ಷ ಕೃಷಿಯಿಂದ ಯಾವ ಆದಾಯವೂ ಸಿಗುವುದಿಲ್ಲ’ ಎಂದು ರೈತರು ಬೇಸರ ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.