ADVERTISEMENT

ಚೆನ್ನಬಸವಣ್ಣ ಸುಜ್ಞಾನದ ಪ್ರಕಾಶ: ಶಿವಮೂರ್ತಿ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 16:14 IST
Last Updated 15 ನವೆಂಬರ್ 2020, 16:14 IST
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಚೆನ್ನಬಸವಣ್ಣ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಶಿವಮೂರ್ತಿ ಮುರುಘಾ ಶರಣರು ಪುಷ್ಪಾರ್ಚನೆ ಸಲ್ಲಿಸಿದರು
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಚೆನ್ನಬಸವಣ್ಣ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಶಿವಮೂರ್ತಿ ಮುರುಘಾ ಶರಣರು ಪುಷ್ಪಾರ್ಚನೆ ಸಲ್ಲಿಸಿದರು   

ಚಿತ್ರದುರ್ಗ: ‘ಚೆನ್ನಬಸವಣ್ಣ ಅವರದು ಜ್ಞಾನ ಪ್ರಕಾಶ. ಅವರ ಬದುಕಿನ ಮಹೋನ್ನತಿ ಎಂದರೆ ಸಮಾಜಕ್ಕೆ ಸುಜ್ಞಾನದ ಪ್ರಕಾಶ ಚೆಲ್ಲಿರುವುದು’ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾಮಠದಲ್ಲಿ ಭಾನುವಾರ ನಡೆದ ‘ಚೆನ್ನಬಸವಣ್ಣ’ ಅವರ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಅವರು ಮಾತನಾಡಿದರು.

‘ಅನ್ನಮಯ, ಜ್ಞಾನಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳನ್ನು ಹೇಳಿದವರು ಚೆನ್ನಬಸವಣ್ಣ’ ಎಂದ ಅವರು, ‘ರುಚಿಯ ಜೊತೆ ಹೋದವರು ಸಾಧನೆ ಮಾಡಲಾರರು. ಆದರೆ, ಅಭಿರುಚಿಯ ಜೊತೆ ಸಾಗಿದಾಗ ಅಪ್ರತಿಮ ಸಾಧನೆಗೈಯಲು ಸಾಧ್ಯ ಎಂಬುದಕ್ಕೆ ಅಧಿಕ ಜ್ಞಾನಿಯಾದ ಇವರು ಮಾದರಿಯಾಗಿದ್ದಾರೆ’ ಎಂದರು.

ADVERTISEMENT

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕೆಇಬಿ ಷಣ್ಮುಖಪ್ಪ, ಬಸವರಾಜ ಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.