
ನಾಯಕನಹಟ್ಟಿ: ತಳಕು ಗ್ರಾಮದ ಬಸ್ ನಿಲ್ದಾಣ ಸಮೀಪ ಇರುವ ಅಂಗಡಿಮುಂಗಟ್ಟುಗಳಲ್ಲಿ ಶುಕ್ರವಾರ ರಾತ್ರಿ ಸರಣಿ ಕಳವು ನಡೆದಿದೆ.
ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದ ಬಸ್‌ನಿಲ್ದಾಣದಲ್ಲಿ ಹಲವು ಅಂಗಡಿಮುಂಗಟ್ಟುಗಳಿವೆ. ಶುಕ್ರವಾರ ರಾತ್ರಿ ಎಂದಿನಂತೆ ವಿವಿಧ ಅಂಗಡಿಗಳ ಮಾಲಿಕರು ವ್ಯಾಪಾರವಹಿವಾಟು ಮುಗಿಸಿ ಅಂಗಡಿಗಳಿಗೆ ಬೀಗಹಾಕಿಕೊಂಡು ಮನೆಗೆ ತೆರಳಿದ್ದಾರೆ. ಕಳ್ಳರು ಅಂಗಡಿಗಳ ಬಳಿ ಹೊಂಚುಹಾಕಿ ಕುಳಿತು ಒಂದೊಂದೇ ಅಂಗಡಿಗಳ ಬೀಗಮುರಿದು ಹಣ, ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.
ತಳಕು ಬಸ್ ನಿಲ್ದಣದಲ್ಲಿದ್ದ ಸ್ನೇಹಜೀವಿ ಪ್ರಾವಿಷನ್ ಸ್ಟೋರ್, ಶಿವಸಂಕಲ್ಪ ಇಲೆಕ್ಟ್ರಾನಿಕ್ಸ್, ಸಿಗಂದೂರಿಶ್ವೇರಿ ಫರ್ಟಿಲೈಸರ್ಸ್ ಸೇರಿ ಒಟ್ಟು ಏಳು ಅಂಗಡಿಗಳಲ್ಲಿ ಈ ಕೃತ್ಯ ನಡೆದಿದೆ. ಕಳ್ಳತಮದ ದೃಶ್ಯಾವಳಿಗಳು ಅಂಗಡಿಗಳ ಮುಂದೆ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಶನಿವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಸಿಪಿಐ ಹನುಮಂತಪ್ಪ ಎಂ.ಶಿರೇಹಳ್ಳಿ, ಪಿಎಸ್‌ಐ ಜಿ.ಪಾಂಡುರಂಗ, ಚಿತ್ರದುರ್ಗದ ಬೆರಳಚ್ಚು ತಜ್ಞರು, ಶ್ವಾನದಳ ಸೇರಿ ಪರಿಣಿತರ ತಂಡ ಬಂದು ಪರಿಶೀಲಿಸಿತು.
ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.