ADVERTISEMENT

ಚಿತ್ರದುರ್ಗ: ನಟಿ ತಾರಾ ಅನೂರಾಧಾಗೆ ಶಿಮುಶ ರಾಷ್ಟ್ರೀಯ ನಾಟಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 3:00 IST
Last Updated 29 ಡಿಸೆಂಬರ್ 2021, 3:00 IST
ತಾರಾ ಅನೂರಾಧಾ
ತಾರಾ ಅನೂರಾಧಾ   

ಚಿತ್ರದುರ್ಗ: ಇಲ್ಲಿಯ ಮುರುಘಾ ಮಠದಿಂದ ಜಮುರಾ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ನೀಡಲಾಗುವ 2021ನೇ ಸಾಲಿನ ಶಿಮುಶ ರಾಷ್ಟ್ರೀಯ ನಾಟಕ ಪ್ರಶಸ್ತಿಗೆ ಕಲಾವಿದೆ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧಾ ಅವರನ್ನು ಆಯ್ಕೆ ಮಾಡಲಾಗಿದೆ.

ಕಲಾವಿದೆಯಾಗಿನಾಡಿಗೆನೀಡಿರುವಸೇವೆಪರಿಗಣಿಸಿತಾರಾಅವರನ್ನುಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.ಜನವರಿ 1ರಂದು ಉದ್ಘಾಟನೆಯಾಗುವ ನಾಟಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ₹ 1 ಲಕ್ಷ ನಗದು, ಫಲಕ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT