ADVERTISEMENT

ಸಿರಿಗೆರೆ: ₹1.45 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 14:06 IST
Last Updated 19 ಜೂನ್ 2025, 14:06 IST
ಸಿರಿಗೆರೆ ಸಮೀಪದ ಬಹದ್ದೂರ್‌ಗಟ್ಟ ಹೊಸಹಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ.ಚಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು
ಸಿರಿಗೆರೆ ಸಮೀಪದ ಬಹದ್ದೂರ್‌ಗಟ್ಟ ಹೊಸಹಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ.ಚಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು   

ಸಿರಿಗೆರೆ: ‘ಹೊಳಲ್ಕೆರೆ ಕ್ಷೇತ್ರದ ಜನರು ಸುಂದರವಾದ ಬದುಕು ಕಟ್ಟಿಕೊಳ್ಳಬೇಕೆಂಬುದು ನನ್ನ ಆಸೆ’ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ಭರಮಸಾಗರ ಸಮೀಪದ ಬಹದ್ದೂರುಗಟ್ಟ ಹೊಸಹಟ್ಟಿ ಗ್ರಾಮದಲ್ಲಿ ₹1.45 ಕೋಟಿ ವೆಚ್ಚದಲ್ಲಿ ನೂತನ ಆಶ್ರಯ ಬಡಾವಣೆ ಮತ್ತು ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಮುಂದಿನ ಮೂರ್ನಾಲು ತಿಂಗಳ ಅವಧಿಯಲ್ಲಿ ನಿವೇಶನಗಳನ್ನು ವಿಂಗಡಿಸಿ ಅಗತ್ಯ ಇರುವವರಿಗೆ ಮನೆಗಳನ್ನು ಕಟ್ಟಿಸುವ ಯತ್ನ ಮಾಡುತ್ತೇನೆ ಎಂದು ಹೇಳಿದರು.

ADVERTISEMENT

ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್, ಡಿ.ಎಸ್.ಪ್ರವೀಣ್‍ಕುಮಾರ್, ಆನಂದಪ್ಪ, ಹಿರೇಬೆನ್ನೂರು ರಾಜಣ್ಣ, ಮಂಜಣ್ಣ, ಶಿವಣ್ಣ, ಚಂದ್ರಶೇಖರ್, ಬಸಣ್ಣ ಹನುಮಂತಪ್ಪ, ಚನ್ನಬಸಪ್ಪ, ವಾಸುದೇವ್, ಕೆ.ಆರ್.ಡಿ.ಐ.ಎಲ್. ಎಂಜಿನಿಯರ್ ತೇಜಸ್ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.