ADVERTISEMENT

ಸಿರಿಗೆರೆ| ಮಳೆ ನೀರಿನ ಸಂರಕ್ಷಣೆಗೆ ಆದ್ಯತೆ: ಶಾಸಕ ಎಂ. ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:17 IST
Last Updated 8 ಡಿಸೆಂಬರ್ 2025, 6:17 IST
ಸಿರಿಗೆರೆ ಸಮೀಪದ ಅಡವಿಗೊಲ್ಲರಹಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಎಂ.ಚಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು
ಸಿರಿಗೆರೆ ಸಮೀಪದ ಅಡವಿಗೊಲ್ಲರಹಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಎಂ.ಚಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು   

ಸಿರಿಗೆರೆ: ಮಳೆಗಾಲದಲ್ಲಿ ಭೂಮಿಗೆ ಬೀಳುವ ನೀರು ವ್ಯರ್ಥವಾಗಿ ಹರಿಯುವುದನ್ನು ತಪ್ಪಿಸಲು ಸಲುವಾಗಿ ಹೊಳಲ್ಕೆರೆ ಕ್ಷೇತ್ರದಾದ್ಯಂತ ಚಿಕ್ಕ ಕೆರೆಗಳು ಹಾಗೂ ಚೆಕ್‌ ಡ್ಯಾಂ ನಿರ್ಮಾಣಕ್ಕೆ ಮುಂದಾಗಿದ್ದೇನೆ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ಭರಮಸಾಗರ ಸಮೀಪದ ಅಡವಿಗೊಲ್ಲರಹಟ್ಟಿ ಗ್ರಾಮದಲ್ಲಿ ₹67 ಲಕ್ಷ ವೆಚ್ಚದ ಸಿ.ಸಿ. ರಸ್ತೆ, ಶಾಲಾ ಕೊಠಡಿ, ಸೇತುವೆ, ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

ಚೆಕ್‌ಡ್ಯಾಂಗಳಿಂದ ಅಂತರ್ಜಲ ವೃದ್ಧಿಯಾಗಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ನೀಗಿದೆ. ಕೃಷಿಯ ಚಟುವಟಿಕೆಗಳಿಗೆ ಚೆಕ್‌ಡ್ಯಾಂಗಳಿಂದ ಅನುಕೂಲವಾಗಿದೆ ಎಂದರು.

ADVERTISEMENT

ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ಮಾಜಿ ಅಧ್ಯಕ್ಷ ಶೈಲೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ನಾಗರಾಜ್, ಉಪಾಧ್ಯಕ್ಷೆ ಕವಿತಾ ಲೋಕೇಶ್, ಸದಸ್ಯರಾದ ಶರಣಪ್ಪ, ಬಸವರಾಜ್, ರುದ್ರೇಶ್, ನವೀನ್, ನಾರಪ್ಪ, ಕಲ್ಲೇಶ್, ರೈತ ಮುಖಂಡರಾದ ನಾರಪ್ಪ, ದೇವೇಂದ್ರಪ್ಪ, ಹನುಮಂತಪ್ಪ, ಕರಿಬಸಪ್ಪ, ಶರಣಪ್ಪ, ನಿಂಗಪ್ಪ, ಶೇಖರಪ್ಪ, ಕರಿಯಪ್ಪ, ಹೊನ್ನೂರ್ ಆಲಿ, ಮಂಜುನಾಥ್, ರುದ್ರೇಶ್, ತಿಪ್ಪೇಸ್ವಾಮಿ, ಕೊಟ್ರೇಶ್, ಅಂಜಿ ಹಾಗೂ ಗ್ರಾಮದ ಮುಖಂಡರು, ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.