
ಮೊಳಕಾಲ್ಮುರು ಸಮೀಪದ ಸೂಲೇನಹಳ್ಳಿಯಲ್ಲಿ ಈಚೆಗೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳನ್ನು ಸ್ಥಳ ಮಹಜರು ಶುಕ್ರವಾರ ನಡೆಸಲಾಯಿತು
ಮೊಳಕಾಲ್ಮುರು: ಸಮೀಪದ ಸೂಲೇನಹಳ್ಳಿ ಬಳಿಯ ಇಟ್ಟಿಗೆ ಭಟ್ಟಿಯಲ್ಲಿ ನಡೆದಿದ್ದ ಕಾರ್ಮಿಕನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಜನ ಆರೋಪಿಗಳನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಫೆ. 17 ರಂದು ಪ್ರಕರಣ ನಡೆದಿದ್ದು, ಕೃತ್ಯ ನಡೆದ 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ಆರ್. ಜಿತೇಂದ್ರ, ಕೆ.ಎಸ್. ಬೋರಯ್ಯ, ಬೋರಮ್ಮ ಚಂದ್ರಣ್ಣ, ಕರಿಬಸಮ್ಮ ಬೋರಯ್ಯ, ಎಂ.ಟಿ. ಅಜ್ಜಣ್ಣ ಹಾಗೂ ಒಬ್ಬ ಬಾಲಾಪರಾಧಿಯನ್ನು ಬಂಧಿಸಲಾಗಿದೆ. ಘಟನೆಗೆ ಕಾರಣ ಕುರಿತು ತನಿಖೆ ನಡೆಸಲಾಗುತ್ತಿದೆ.
ಎಸ್‌ಪಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಎಸ್‌ಪಿ ಆರ್. ಶಿವಕುಮಾರ್, ಡಿವೈಎಸ್‌ಪಿ ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ಸಿಪಿಐ ಆರ್. ನಾಗರಾಜ್ ಮತ್ತು ಪಿಎಸ್‌ಐ ಮಹೇಶ್ ಹೊಸಪೇಟೆ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ತಂಡ ರಚಿಸಲಾಗಿತ್ತು. ಸಿಬ್ಬಂದಿ ವೀರಣ್ಣ, ಓಬಣ್ಣ, ಸತೀಶ್, ಖಾದರ್ ಭಾಷಾ, ಪ್ರಭುದೇವ್, ನಂದಪ್ಪ, ಹುಲುಗಪ್ಪ, ಲಕ್ಷ್ಮೀಪತಿ, ಆಶಾರಾಣಿ, ಸೌಭಾಗ್ಯಾ ಬಾರಿಕೇರ ತಂಡದಲ್ಲಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.